ತುಂಬೆ ವೆಂಟೆಡ್ ಡ್ಯಾಂ ಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ

ಮಂಗಳೂರು ಎಪ್ರಿಲ್ 22 ಮಂಗಳೂರು ಮಹಾನಗರಪಾಲಿಕೆ ನೀರಿನ ಅಭಾವ ಇದೆ ಎಂದು ಹೇಳಿ ರೇಶನಿಂಗ್ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಇಂದು ನೀರಿನ ಲಭ್ಯತೆಯ ವಸ್ತು ಸ್ಥಿತಿ ಅರಿಯಲು ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಅವರೊಂದಿಗೆ ತುಂಬೆ ವೆಂಟೆಡ್ ಡ್ಯಾಮ್‌ ಗೆ ಭೇಟಿ ಮಾಡಿದರು

ತುಂಬೆಯ ಹೊಸ ಅಣಿಕಟ್ಟಿನಲ್ಲಿರುವ ನೀರಿನ ಶೇಖರಣೆ ಮತ್ತು ಲಭ್ಯತೆಯ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಪ್ರಸ್ತುತ ಮೆಲ್ನೋಟಕ್ಕೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದು ಎಂದು ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ.


ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊರತೆಯಾಗದ ರೀತಿಯಲ್ಲಿ ಸರಬರಾಜು ಮಾಡಬೇಕೆಂದು ಅಧಿಕಾರಿಗಳಿ ಸೂಚನೆ ನೀಡಿದರು. ಒಂದು ವೆಳೆ ಎತ್ತರದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಹೋಗದಿದ್ದಲ್ಲಿ ಟ್ಯಾಂಕರುಗಳ ಮೂಲಕ ನೀರು ಕೊಡಬೇಕು ಎಂದ ಶಾಸಕರು ನಿರ್ದೇಶನ ನೀಡಿದರು.

ಅಲ್ಲದೆ ಸಾರ್ವಜನಿಕರಲ್ಲಿ ಅನಾವಶ್ಯವಾಗಿ ನೀರನ್ನು ಪೋಲು ಮಾಡಬೇಡಿ, ಮಳೆಗಾಲ ಆರಂಭಕ್ಕೆ ಇನ್ನೂ ಸಮಯವಿದ್ದು ನೀರಿನ ಮಿತ ಬಳಕೆ ಮಾಡುವಂತೆ ಸಲಹೆ ಮಾಡಿದ್ದಾರೆ. ಮತ್ತು ವಾಹನಗಳನ್ನು ತೊಳೆಯಲು, ತೋಟಗಳಿಗೆ ಈ ನೀರನ್ನು ಬಳಸಬೇಡಿ ಎಂದು ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.