Connect with us

DAKSHINA KANNADA

ಸುಳ್ಯದಲ್ಲಿ ಶಾಸಕ ರಾಮದಾಸ್ ಕಾರು ಅಪಘಾತ : ಅಪಾಯದಿಂದ ಪಾರು

ಸುಳ್ಯದಲ್ಲಿ ಶಾಸಕ ರಾಮದಾಸ್ ಕಾರು ಅಪಘಾತ : ಅಪಾಯದಿಂದ ಪಾರು

ಸುಳ್ಯ ಅಗಸ್ಟ್ 23: ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಶಾಸಕ‌ ರಾಮದಾಸ್ ಅವರ ಕಾರು‌ ಸುಳ್ಯ ಸಮೀಪ ಅಪಘಾತಕ್ಕೀಡಾಗಿದೆ. ಶಾಸಕ ರಾಮದಾಸ್ ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದು, ಸುಳ್ಯ ತಾಲೂಕಿನ ತಾಲ್ಲೂಕಿನ‌ ಜಾಲ್ಸೂರು ಬಳಿ ಕಾರು ಚರಂಡಿ‌ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ರಾಮದಾಸ್ ಹಾಗೂ ಅವರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪಕ್ಕದಲ್ಲಿಯೇ ಇರುವ‌ ಪೆಟ್ರೋಲ್ ಬಂಕ್‌ನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಸಹೋದರನ ಪುತ್ರ‌ ಆಶಿಕ್ ಅವರು ಸ್ಥಳಕ್ಕೆ ಬಂದು, ರಾಮದಾಸ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನ ನಿದ್ರೆ ಮಂಪರಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Facebook Comments

comments