ನಾನು ಪಕ್ಷ ಬಿಡುವ ಪ್ರಶ್ನೇಯೆ ಇಲ್ಲ – ಶೃಂಗೇರಿ ಶಾಸಕ ರಾಜುಗೌಡ

ಮಂಗಳೂರು ಜುಲೈ 10: ನನಗೆ ಸಹಿಸಲಾರದ ಒತ್ತಡಗಳು ಬಂದಿದ್ದರು ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶೃಂಗೇರಿ ಕಾಂಗ್ರೇಸ್ ಶಾಸಕ ರಾಜು ಗೌಡ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜು ಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದೂರವಾಣಿ ಮೂಲಕ ನಿನ್ನೆ ಸಂಪರ್ಕಿಸಿದ್ದರು. ಈ ಹಿನ್ನಲೆಯಲ್ಲಿ ಶಾಸಕ ರಾಜುಗೌಡ ಕೂಡ ಪಕ್ಷ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ ಶೃಂಗೇರಿ ಶಾಸಕ ರಾಜು ಗೌಡ ನನಗೆ ಸಹಿಸಲಾರದ ಒತ್ತಡಗಳು ಬಂದಿದೆ, ಆದರೆ ನಾನು ಪಕ್ಷ ಬಿಟ್ಟು ಹೋಗಲ್ಲ ನಾನು ನನ್ನ ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ಶೃಂಗೇರಿಯಿಂದ ಪ್ರಥಮ ಬಾರಿಗೆ ಎಂಎಲ್ಎ ಆಗಿದ್ದೇನೆ ಪಕ್ಷ ನನಗೆ ಅವಕಾಶ ನೀಡಿದ್ದು ಕಾಂಗ್ರೇಸ್ ಪಕ್ಷ ಬೀಡುವ ಮಾತೆ ಇಲ್ಲ ಎಂದು ಹೇಳಿದರು.

VIDEO

Facebook Comments

comments