DAKSHINA KANNADA
‘ಕೋಮು ಸಂಘರ್ಷಕ್ಕೆ ಮತಾಂದರ ಸಂಚು, ಈದ್ ಮಿಲಾದ್ ಮೆರವಣಿಗೆ ರದ್ದು ಮಾಡಿ’ ; ಪೊಲೀಸ್ ಇಲಾಖೆಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಒತ್ತಾಯ
ಸುರತ್ಕಲ್ : ಈದ್ ಮಿಲಾದ್ ಮುಸ್ಲಿಂ ಮತದವರ ಆಚರಣೆಯಲ್ಲಿ ಮೆರವಣಿಗೆ ಮಾಡಲೆಬೇಕಂತ ಯಾವುದೇ ಆಜ್ಞೆ ಇಲ್ಲ ,ಈ ಬಾರಿ ಅಶಾಂತಿಯನ್ನು ಸೃಷ್ಟಿಸಲು ಮತಾಂದರಿಂದ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದ್ದು ಈದ್ ಮೆರವಣಿಗೆ ರದ್ದು ಮಾಡಿ ಶಾಸಕ ಡಾ.ವೈ . ಭರತ್ ಶೆಟ್ಟಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಹಿಂದೂ ಸಂಘಟನೆಯ ಪ್ರಮುಖರಿಗೆ ಬಿ.ಸಿ ರೋಡ್ ಕೈಕಂಬದ ಓರ್ವ ಕೋಮುವಾದಿಯೊಬ್ಬ ತಾಕತ್ತಿದ್ದರೆ ಕೈಕಂಬಕ್ಕೆ ಬರುವಂತೆ ಸಾಮಾಜಿಕ ಜಾಲತಾಣದಲ್ಲಿಬನೇರವಾಗಿ ಕೋಮು ಹಿಂಸೆಗೆ ಪಂಥಾಹ್ವಾನ ನೀಡಿದ್ದಾನೆ.ನಮಗೆ ಸಾವಿರ ಜನ ಸೇರಿಸಲು ತಿಳಿದಿದೆ. ಎದುರೇಟು ನೀಡಲೂ ಹಿಂಜರಿಕೆಯಿಲ್ಲ.ಆದರೆ ಹಿಂಸೆಯನ್ನು ಪ್ರಚೋದಿಸುವವರು ಹಿಂದೂಗಳಲ್ಲ.
ಕೋಮು ಹಿಂಸೆಗೆ ಯತ್ನಿಸಿದ ಈತನ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲೆಯಲ್ಲಿ ಹಿಂಸೆಯ ದಳ್ಳುರಿ ಏಳಬಹುದು.
ಈ ಬಾರಿ ಅಹಿತಕರ ಘಟನೆ ನಡೆಯುವಂತಾಗಲು ಕೆಲವರು ಸನ್ನಿವೇಶ ಸೃಷ್ಟಿಸುತ್ತಿದ್ದಾರೆ.ಹಿಂಸಾತ್ಮಾಕ ಘಟನೆ ನಡೆಸಲು ಪ್ರಚೋದಿಸುವ
ಪುಡಾರಿಗಳ ವಿರುದ್ಧ ತಕ್ಷ ಣ ಕ್ರಮ ಕೈಗೊಳ್ಳಬೇಕು ಹಾಗೂ ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಈದ್ ಮಿಲಾದ್ ಮೆರವಣಿಗೆ ರದ್ದು ಮಾಡಿ ತಕ್ಷಣ ಆದೇಶ ಹೊರಡಿಸಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
You must be logged in to post a comment Login