Connect with us

    LATEST NEWS

    ಹಜ್ ಭವನ ಬಗ್ಗೆ ಸಚಿವರ ಜೊತೆ ಸಮಾಲೋಚನೆ :ಡಾ.ಭರತ್ ಶೆಟ್ಟಿ

    ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ಯ ವಿವಾದದ ಕೇಂದ್ರ ಬಿಂದುವಾಗಿರು ಹಜ್ ಭವನ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ಶೆಟ್ಟಿ ಸ್ಪಷ್ಟನೆ ನೀಡಿದ್ದು, ಮುಂದಿನ ದಿನಗಳಲ್ಲಿ ಯಾವುದೇ ವಿವಾದಕ್ಕೆ ಅವಕಾಶವಾಗದೆ ಸಾಮರಸ್ಯಕ್ಕೆ ವಾಗಬೇಕೆಂಬ ನಿಟ್ಟಿನಲ್ಲಿ ಅಡ್ಯಾರ್‌ನಲ್ಲಿ ಹಜ್ ಭವನ ನಿರ್ಮಾಣವನ್ನು ಈಗ ಗುರುತಿಸಲಾಗಿರುವ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಮಾಡುವುದು ಅನಿವಾರ್ಯವಾಗಿದೆ. ಇದು ಮುಂದಿನ ದಿನಗಳಲ್ಲಿ ಪ್ರದೇಶದಲ್ಲಿ ಸಾಮರಸ್ಯ, ಸೌಹಾರ್ದ ಉಳಿಸುವ ದೃಷ್ಟಿಯಿಂದ ಅತ್ಯಗತ್ಯವಾಗಿದೆ, ಈ ಬಗ್ಗೆ ವಕ್ಫ್ ಸಚಿವರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಕಾರ್ಯದರ್ಶಿಯವರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ.ವೈ.ಭರತ್‌ಶೆಟ್ಟಿ ತಿಳಿಸಿದ್ದಾರೆ.

    ಅಡ್ಯಾರ್ ನ ಸ್ಥಳೀಯ ಹಿಂದೂ ಸಮುದಾಯದ ಸೋಮನಾಥ ಕಟ್ಟೆಯಲ್ಲಿ ಪ್ರತಿ ವರ್ಷ ದೈವ ನೇಮ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.ಸ್ಥಳೀಯ ಹಿಂದೂ ಮುಖಂಡರು ಮತ್ತು ನಾಗರಿಕರು ಮುಂದಾಗಬಹುದಾದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಸಮುದಾಯದ ಕಾರ್ಯಕ್ರಮ ಇಲ್ಲಿ ಆಯೋಜಿತವಾಗುವಂತಹ ಸಂದರ್ಭ ಸಮಸ್ಯೆಯಾಗುವ ಸಾಧ್ಯತೆ ಇದೆ.ಈ ವಿಷಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ.ಯಾವುದೇ ಅಭಿವೃದ್ಧಿ ಕಾರ್ಯಗಳು,ಸರಕಾರದ ಅನುದಾನ ಎಲ್ಲಾ ಸಮುದಾಯಕ್ಕೆ ಉಪಯೋಗವಾಗುವುದರ ಜತೆಗೆ ಸಾಮರಸ್ಯ ಕ್ಕೂ ಕಾರಣವಾಗಬೇಕು ಎಂಬುದಾಗಿ ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮಂಗಳೂರು ಹೊರವಲಯದ ಅಡ್ಯಾರ್‌ ಗ್ರಾಮದಲ್ಲಿ ನೂತನ ಹಜ್ ಭವನ ನಿರ್ಮಾಣಕ್ಕೆ ಹಜ್ ಭವನ ನಿರ್ಮಾಣ ಸಮಿತಿ ನಿರ್ಧರಿಸಿರುವುದು ನನ್ನ ಅರಿವಿಗೆ ಬಂದಿರಲಿಲ್ಲ.ಈ ಬಗ್ಗೆ ನನ್ನ ಜೊತೆ ಯಾರೂ ಚರ್ಚಿಸಿರಲಿಲ್ಲ.ನಾನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಾಗಲೇ ಈ ಬಗ್ಗೆ ನನಗೆ ಮಾಹಿತಿ ತಿಳಿದದ್ದು, ಈ ಬಗ್ಗೆ ವಕ್ಫ್ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ವ ಕ್ಫ್ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ಸಮಾಲೋಚಿಸಿದ ಬಳಿಕವೇ ತೀರ್ಮಾನ ವೊಂದನ್ನು ಕೈಗೊಳ್ಳ ಲಾಗುವುದು ಎಂದು ಡಾ.ಭರತ್ ಶೆಟ್ಟಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply