DAKSHINA KANNADA
ಹೊಸ ಎಸ್ಪಿ, ಕಮಿಷನರ್ ಬಂದ ಬಳಿಕ ಹೋರಾಟ ಮಾಡುವವರ ದಮ್ಮ ನಿಂತು ಹೋಗಿದೆ ಬಳಿಕ ಎಲ್ಲರೂ ಬಾಲ ಮುದುಡಿ ಕುಳಿತಿದ್ದಾರೆ – ಶಾಸಕ ಅಶೋಕ ರೈ

ಪುತ್ತೂರು ಜುಲೈ 07: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೊಸ ಎಸ್ಪಿ ಕಮೀಷನರ್ ಬಂದ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೋರಾಟ ಮಾಡುವವರ ದಮ್ಮ ನಿಂತು ಹೋಗಿದೆ. ಇದೀಗ ಎಲ್ಲರೂ ಬಾಲ ಮದುಡಿ ಕುಳಿತಿದ್ದಾರೆ ಎಂದು ಶಾಸಕ ಅಶೋಕ ರೈ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಶಾಸಕ ಮಾತನಾಡಿರು ವಿಡಿಯೋ ಇದೀಗ ವೈರಲ್ ಆಗಿದೆ. ಜಿಲ್ಲೆಗೆ ಹೊಸ ಎಸ್ಪಿ, ಕಮಿಷನರ್ ಬಂದ ಬಳಿಕ ಎಲ್ಲರೂ ಬಾಲ ಮುದುಡಿ ಕುಳಿತಿದ್ದಾರೆ. ಮನೆ ಮನೆಗೆ ಹೋಗಿ ಚಡ್ಡಿಯಲ್ಲಿ ನಿಲ್ಲಿಸಿ ಪೋಲೀಸರು ಪೋಟೋ ತೆಗೆದು ಹೋಗಿದ್ದರು. ಇನ್ನು ಚಡ್ಡಿಯಲ್ಲಿ ನಿಲ್ಲಿಸಿ ಸ್ಲೇಟು ಕೊಡಲು ಬಾಕಿ ಇದೆ. ಅದರ ಬಗ್ಗೆ ಹೋರಾಟ ಮಾಡುವವರು ಪತ್ತೆಯಿಲ್ಲ.

ವಾಟ್ಸ್ ಅಪ್ ನಲ್ಲಿ ಉದ್ದುದ್ದ ಬರೆಯುವವ, ಬೈಯುವವರು, ಮೈಕ್ ಸಿಕ್ಕಿದರೆ ಉದ್ದುದ್ದ ಮಾತಾಡುವವರು ಎಲ್ಲಿದ್ದಾರೆ? ಮನೆ ಮನೆಗೆ ತೆರಳಿ ಚಡ್ಡಿಯಲ್ಲಿ ಫೋಟೋ ತೆಗೆದ ಸಂದರ್ಭದಲ್ಲಿ ಹೋರಾಟದ ಮಾತನಾಡಿದ್ದರು. ಆದರೆ ಅವರ ಸುದ್ದಿಯೇ ಇಲ್ಲ ಎಂದು ಹಿಂದೂ ಸಂಘಟನೆಗಳ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಜನರಿಗೆ ಅಭಿವೃದ್ಧಿ ಬೇಕು, ಇಲ್ಲಿನ ಜನ ಅತೀ ಹೆಚ್ಚಿನ ತೆರಿಗೆ ಕಟ್ಟುತ್ತಾರೆ. ಮೆಡಿಕಲ್ ಕಾಲೇಜು, ಪ್ರವಾಸೋದ್ಯಮಕ್ಕೆ ಇಲ್ಲಿ ಒತ್ತು ನೀಡಬೇಕು. ಬಿಜೆಪಿ ಈವರೆಗೆ ಜನರನ್ನು ಮಂಗ ಮಾಡಿದ್ದು ಸಾಕು ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.
3 Comments