Connect with us

    LATEST NEWS

    3 ಸಾವಿರ ಇನ್ಸ್ಟಾಗ್ರಾಂ ಅಕೌಂಟ್ ಚೆಕ್ ಮಾಡಿದಾಗ ಸಿಕ್ಕಿದ್ಲು ಬಿಜೈಯಿಂದ ನಾಪತ್ತೆಯಾಗಿದ್ದ ಹುಡುಗಿ

    ಮಂಗಳೂರು ಅಗಸ್ಟ್ 06: ಬಿಜೈನ ನಿವಾಸಿಯಾಗಿರುವ 18 ವರ್ಷದ ಯುವತಿ ಸಿಮ್ ಇಲ್ಲದ ಮೊಬೈಲ್ ನೊಂದಿಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಯುವತಿಯನ್ನು ಕಾರ್ಕಳದಲ್ಲಿ ಪತ್ತೆ ಹಚ್ಚಿದ್ದಾರೆ. ಜುಲೈ 30 ರಂದು ಯುವತಿ ಮನೆಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಳು. ಈ ವೇಳೆ ಸಿಮ್ ಇಲ್ಲದ ಮೊಬೈಲ್ ನ್ನು ತೆಗೆದುಕೊಂಡು ಹೋಗಿದ್ದಳು. ಈ ಕುರಿತಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.


    ತನಿಖೆ ಕೈಗೊಂಡ ಬರ್ಕೆ ಪೊಲೀಸ್ ಇನ್ಸ್ಪೆಕ್ಟರ್ ತಂಡ, CC TV ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಕಾಣೆಯಾದ ಹುಡುಗಿ ಈ ಹಿಂದೆ social media ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಸುಮಾರು 3000 instagraam account ಮತ್ತು moja App ನ account ಗಳನ್ನು ಪರಿಶೀಲಿಸಿ ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ಸಂದರ್ಭದಲ್ಲಿ ಸೂರಜ್ ಪೂಜಾರಿ ಎಂಬ 23 ವರ್ಷದ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು,ಗಜೇಂದ್ರ ಬೈಲ್ ಗ್ರಾಮದ ಹುಡುಗನೊಂದಿಗೆ ಆತನ ಮನೆಯಲ್ಲಿ ಕಾಣೆಯಾದ ಹುಡುಗಿ ಇದ್ದು, ಅವರುಗಳನ್ನು ಬರ್ಕೆ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರಿಬ್ಬರು ಪ್ರೀತಿಸುತ್ತಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡು ಬಂದಿರುತ್ತೆ. ಹುಡುಗಿಯು ತಂದೆ – ತಾಯಿ ರವರ ಜೊತೆ ಹೋಗುವುದಿಲ್ಲ ವೆಂದ ಕಾರಣಕ್ಕೆ ಸ್ವಾದಾರ ಕೇಂದ್ರಕ್ಕೆ ಕಳುಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply