ಕೇರಳ ನವೆಂಬರ್ 20: ಶಬರಿಮಲೆ ಅಯ್ಯಪ್ಪನ ವಾರ್ಷಿಕ ಮಹೋತ್ಸವ ಪ್ರಾರಂಭವಾಗಿದೆ. 48 ದಿನಗಳ ಕಾಲ ವೃತ ಮಾಡಿ ಕೊನೆಗೆ ಅಯ್ಯಪ್ಪನ ದರ್ಶನಕ್ಕಾಗಿ ಮಾಲಾಧಾರಿಗಳು ಹಾತೊರೆಯುತ್ತಾರೆ. ಅಯ್ಯಪ್ಪನ ಒಂದು ದರ್ಶನ ಅವರ ಅಷ್ಟು ದಿನಗಳ ಧಣಿವನ್ನು ನಿವಾರಿಸುತ್ತದೆ. ಆದರೆ ಅಯ್ಯಪ್ಪನ ನೋಡಲು ಬಂದು ದರ್ಶನ ಸಿಗದೇ ಹೊದರೆ ಆಗುವಂತ ಸ್ಥಿತಿ ಮಾತ್ರ ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಅಯ್ಯಪ್ಪ ಮಾತ್ರ ತನ್ನ ನಂಬಿ ಬಂದ ಭಕ್ತರನ್ನು ಹಾಗೆ ಕಳುಹಿಸುವುದಿಲ್ಲ, ಅಂತಹದೊಂದು ಪವಾಡ ಶಬರಿಮಲೆಯಲ್ಲಿ ನಡೆದಿದೆ.


ಕೇರಳದ ಕೊಲ್ಲಂನಿಂದ ಬಂದ ಗಿರಿಜಾ ಅವರಿಗೆ ಶಬರಿಮಲೆ ಯಾತ್ರೆ ಅವರ ಜೀವನ ಪ್ರಮುಖ ಆದ್ಯಾತ್ಮಿಕ ಕ್ಷಣವಾಗಿತ್ತು, 48 ದಿನಗಳ ಕಾಲ ವೃತ ಆಚರಿಸಿ 17 ಜನರ ಗುಂಪಿನ ಜೊತೆ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದರು, ವರ್ಚ್ಯುವಲ್ ಕ್ಯೂ ಪಾಸ್ ಗಳನ್ನು ತೆಗೆದುಕೊಂಡು ಅಯ್ಯಪ್ಪನ ದರ್ಶನಕ್ಕೆ ಪಂಪೆಗೆ ಬಂದಿದ್ದರು, ಆದರೆ ಮುಂದೆ ನಡೆದಿದ್ದು ಮಾತ್ರ ಅವರು ಎಣಿಸಿಕೊಳ್ಳದ ಸ್ಥಿತಿ, ಶಬರಿಮಲೆಯಲ್ಲಿ ಮಂಗಳವಾರ ಅನಿರೀಕ್ಷಿತ ಮಟ್ಟದಲ್ಲಿ ಭಕ್ತರು ಆಗಮಿಸಿದ್ದರು. ದರ್ಶನಕ್ಕೆ ಕನಿಷ್ಟ 10 ಗಂಟೆಗಳು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು, ಗಿರಿಜಾ ಅವರು ಜೊತೆ ಬಂದ ಇಬ್ಬರು ಪುಟಾಣಿ ಮಕ್ಕಳು ಹಾಗೂ ಉಳಿದ 6 ಮಂದಿ ಇತರ ಮಹಿಳೆಯರು , ಶಬರಿಮಲೆಯಲ್ಲಿ ಸ್ಥಿತಿ ನೋಡಿ ಅಯ್ಯಪ್ಪನ ದರ್ಶನ ಸಿಗುವ ಸಾಧ್ಯತೆ ಇಲ್ಲ ಎಂದು ಪಂಪಾದಿಂದ ನಿಲಕ್ಕಲ್ ಗೆ ಹಿಂದಿರುಗಲಾರಂಭಿಸಿದ್ದರು.


48 ದಿನಗಳ ವೃತ ಅಯ್ಯಪ್ಪನ ನೋಡಲು ಹಾತೊರೆದು, ಎಲ್ಲಾ ಕಷ್ಟಗಳನ್ನು ಎದುರಿಸಿ ಶಬರಿಮಲೆ ಬಂದ ಗಿರಿಜಾ ಅವರು ಹಿಂದಿರುಗವ ವೇಳೆ ಕಣ್ಣಿರಿಟ್ಟಿದ್ದರು. ಆದರೆ ಬಳಿಕ ನಡೆದದ್ದೆ ಪವಾಡ, ಅಯ್ಯಪ್ಪ ತನ್ನ ಭಕ್ತರಿಗೆ ದರ್ಶನ ಕೊಡದೆ ಯಾರನ್ನೂ ವಾಪಾಸ್ ಕಳುಹಿಸುವದಿಲ್ಲ ಎಂಬ ಮಾತಿನಂತೆ, ಮಹಿಳೆಯರು ಅಯ್ಯಪ್ಪನ ದರ್ಶನ ಪಡೆಯದೇ ಹೋಗುತ್ತಿದ್ದಾರೆ ಎಂಬ ಸುದ್ದಿ ಶಬರಿಮಲೆ ಪೊಲೀಸ್ ಇಲಾಖೆಯ ಮುಖ್ಯ ಸಂಯೋಜಕರಾದ ಎಡಿಜಿಪಿ ಎಸ್. ಶ್ರೀಜಿತ್ ಅವರ ಗಮನಕ್ಕೆ ಬಂದಿದೆ.


ಈ ವಿಚಾರ ತಿಳಿಯುತ್ತಲೇ ಶ್ರೀಜಿತ್ ಅವರು ತನ್ನ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಮಹಿಳೆಯರನ್ನು ದೇವಸ್ಥಾನಕ್ಕೆ ಬರುವಂತೆ ವ್ಯವಸ್ಥೆ ಮಾಡಲು ಹೇಳಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಲಕ್ಷಾಂತರ ಭಕ್ತರ ನಡುವೆ ಮಹಿಳೆಯರನ್ನು ಪತ್ತೆಹಚ್ಚಿ ಅವರನ್ನು ಬೆಟ್ಟ ಹತ್ತಿಸಿ ಅಯ್ಯಪ್ಪನ ದರ್ಶನಕ್ಕೆ ಕರೆದುಕೊಂಡು ಬಂದಿದ್ದಾರೆ. ಅಯ್ಯಪ್ಪನ ಗರ್ಭಗುಡಿಯ ಎದುರು ಮಕ್ಕಳ ಜೊತೆ ಗಿರಿಜಾ ಅವರು ಅಯ್ಯಪ್ಪನ ದರ್ಶನ ಪಡೆದರು ಧನ್ಯರಾದರು, ಅಯ್ಯಪ್ಪನ ಎದುರು ಕಣ್ಣೀರಿಡುತ್ತಾ ಕೈ ಮುಗಿದು ನಿಂತ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಕ್ಷಾಂತರ ಜನ ಭಕ್ತರ ನಡುವೆ ಯಾರು ದರ್ಶನ ಪಡೆದಿದ್ದಾರೆ ಇಲ್ಲವೊ ಎಂಬ ಸುದ್ದಿ ಸಿಗುವುದು ಕಷ್ಟದ ಸ್ಥಿತಿ, ಸ್ವತಃ ಪೊಲೀಸ್ ಇಲಾಖೆ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವಂತಹ ಸ್ಥಿತಿಯಲ್ಲೂ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮಹಿಳೆಯರು ಸಾಮಾನ್ಯ ನಾಗರೀಕರು ಯಾವುದೇ ಸೆಲೆಬ್ರೆಟಿಗಳಲ್ಲ, ಆದರೆ ನನ್ನನ್ನು ನೋಡಲು ಬಂದು ಹಿಂದಿರುಗುತ್ತಿದ್ದ ಭಕ್ತರನ್ನು ಅಯ್ಯಪ್ಪನ ಕರೆಸಿಕೊಂಡು ದರ್ಶನ ನೀಡಿದ್ದಾರೆ. ಇದೊಂದು ಅಯ್ಯಪ್ಪನ ಪವಾಡವಲ್ಲದೇ ಇನ್ನೇನು ಎಂದು ಜನ ಹೇಳುತ್ತಿದ್ದಾರೆ.

Share Information