Connect with us

    LATEST NEWS

    ಮಿಸ್ ಯುನಿವರ್ಸ್ 2020 ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದ ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೊ

    ಉಡುಪಿ, ಮೇ 18: ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್ 2020 ಸ್ಪರ್ಧೆಯಲ್ಲಿ ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೊ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಆ್ಯಡ್ಲಿನ್ ಕ್ಯಾಸ್ಟೆಲಿನೊ ವಿಶ್ವ ಸುಂದರಿ ಕಿರೀಟ ಗೆಲ್ಲದಿದ್ದರೂ ಇಡೀ ಭಾರತೀಯರ ಮನ ಗೆದ್ದಿದ್ದಾರೆ.

    ಆ್ಯಡ್ಲಿನ್ ಕ್ಯಾಸ್ಟೆಲಿನೊ ಮಿಸ್ ಮಿಸ್ ಯುನಿವರ್ಸ್ 2020ನಲ್ಲಿ ಪ್ರಬಲ ಸ್ವರ್ಧಿಯಾಗಿ, ಕಿರೀಟ ಗೆಲ್ಲುವುದು ಖಚಿತ ಅಂತ ಭಾವಿಸಲಾಗಿತ್ತು.ಆದ್ರೆ ಕೊನೆಗೆ ಕ್ಷಣದಲ್ಲಿ ಕಿರೀಟ ಮೆಕ್ಸಿಕೋ ಸುಂದರಿ ಆ್ಯಂಡ್ರಿಯಾ ಮೆಝು ಅವರಿಗೆ ವಿಶ್ವ ಸುಂದರಿ ಕಿರೀಟ ಒಲಿದು, ಆ್ಯಡ್ಲಿನ್ ಕ್ಯಾಸ್ಟೆಲಿನೊ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಆ್ಯಡ್ಲಿನ್ ಕ್ಯಾಸ್ಟೆಲಿನೊ ಉಡುಪಿಯ ಉದ್ಯಾವರ ಮೂಲದವರಾಗಿದ್ದು, ತಂದೆ ತಾಯಿ ಮಂಗಳೂರು ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು, ಆ್ಯಡ್ಲಿನ್ ಕ್ಯಾಸ್ಟೆಲಿನೊ ಕನ್ನಡ ಭಾಷೆಯೂ ಗೊತ್ತಿದ್ದು, ಕೊಂಕಣಿ ಮಾತೃ ಭಾಷೆ, ಕುವೈತ್‌ನಲ್ಲಿ‌ ಹುಟ್ಟಿದ್ದು ಶಿಕ್ಷಣವನ್ನು ಮುಂಬಯಿನಲ್ಲಿ‌ ಪೂರೈಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply