Connect with us

LATEST NEWS

ಅಪ್ರಾಪ್ತೆಗೆ ಮೊಬೈಲ್ ಕೊಡಿಸಿ ನಿರಂತರ ಅತ್ಯಾಚಾರ – ಆರೋಪಿ ಆರೆಸ್ಟ್

ಮಂಗಳೂರು ಜೂನ್ 10: ಅಪ್ರಾಪ್ತೆ ಬಾಲಕಿಗೆ ಮೊಬೈಲ್ ಗಿಫ್ಟ್ ನೀಡಿ ಬಳಿಕ ಸಲುಗೆ ಬೆಳೆಸಿ ಆಕೆಯ ಮನೆಗೆ ತೆರಳಿ ನಿರಂತರ ಅತ್ಯಾಚಾರ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆರೋಪಿ ಜೋಕಟ್ಟೆಯ ಅಬ್ದುಲ್ ರಫೂರ್ ಎಂದು ಗುರುತಿಸಲಾಗಿದೆ.

ಈತ ಒಂದುವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡ ಆರೋಪಿಯು ಬಳಿಕ ಆಕೆಗೆ ಮೊಬೈಲ್ ಖರೀದಿಸಿದ್ದು ನೀಡಿದ್ದು ಆ ಬಳಿಕ ಪ್ರತಿದಿನ ಸಂದೇಶ ಮಾಡುತ್ತಿದ್ದ ಎನ್ನಲಾಗಿದೆ.
ಬಳಿಕ ಈತ ಬಾಲಕಿಯ ಮನೆಗೆ ರಾತ್ರಿ ಬರಲು ಆರಂಭಿಸಿದ್ದಾನೆ. ಪ್ರತಿದಿನ ರಾತ್ರಿ 1 ಗಂಟೆಗೆ ಆಕೆಯ ಮನೆಯ ಕಾಂಪೌಂಡ್ ಗೋಡೆಯನ್ನು ಹಾರಿ ಬರುತ್ತಿದ್ದ ಈತ ಬಾಲ್ಕನಿಯ ಬಾಗಿಲನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದ.
ಬಳಿಕ ಒಳ ಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.

ಬಾಲಕಿಗೆ ನಿನ್ನೆ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರಲ್ಲಿಗೆ ಕರೆದೊಯ್ದಾಗ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಬಾಲಕಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ದ ಫೊಕ್ಸೋ ಪ್ರಕರಣ ದಾಖಲಾಗಿದೆ.