Connect with us

DAKSHINA KANNADA

ಅಪ್ರಾಪ್ತ ಬಾಲಕಿ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನಿಂದ ಅತ್ಯಾಚಾರ

ಕಡಬ ಫೆಬ್ರವರಿ 20: ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪ ಅತ್ಯಾಚಾರ ಎಸಗಿರುವ ಘಟನೆ ಕಡಬದಲ್ಲಿ ನಡೆದಿದೆ.


ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಿವಾಸಿ ಹದಿನೈದರ ಹರೆಯದ ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಅಣ್ಣನೇ ಅತ್ಯಾಚಾರ ನಡೆಸಿರುವುದಾಗಿ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ವಿಚಾರಣೆ ನಡೆಸಿದಾಗ ದೊಡ್ಡಪ್ಪ ಕೂಡಾ ಅತ್ಯಾಚಾರಗೈದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು ಆರೋಪಿಗಳಾದ ಅಪ್ರಾಪ್ತೆಯ ಅಣ್ಣ ಹಾಗೂ ದೊಡ್ಡಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.