ನಾನು ಗೋಡಂಬಿ ತಿನ್ನೋಕೆ ಬಂದಿಲ್ಲ – ಉಡುಪಿಯಲ್ಲಿ ಅಧಿಕಾರಿಗಳ ವಿರುದ್ದ ಆರ್ ವಿ ದೇಶಪಾಂಡೆ ಗರಂ

ಉಡುಪಿ ಜೂನ್ 18: ಉಡುಪಿ ಜಿಲ್ಲೆಯ ಬರ ನೆರೆ ಹರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್. ವಿ ದೇಶಪಾಂಡೆ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ನಡೆದಿದೆ.

ಉಡುಪಿಯಲ್ಲಿ ಇಂದು ಕಂದಾಯ ಸಚಿವ ಆರ್ .ವಿ ದೇಶಪಾಂಡೆ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೈರ್ಮಲ್ಯ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಉತ್ತರಕ್ಕೆ ಕಂದಾಯ ಸಚಿವರು ಗರಂ ಆದ ಘಟನೆ ನಡೆಯಿತು. ಜಿಲ್ಲೆಯ ಮೂರು ತಾಲೂಕು ಪಂ‌ಚಾಯತ್ ಇಒ ಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದು, ಜಿಲ್ಲೆಯ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು, ನನಗೆ ಉಡಾಫೆ ಉತ್ತರ ಕೊಡಬೇಡಿ, ಟೀಂ ಮಾಡಿ ನಿಮ್ಮ ಕೆಲಸದ ಬಗ್ಗೆ ಸತ್ಯ ಹುಡುಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವಿ ಆರ್ ಗವರ್ನಮೆಂಟ್, ಯು ಆರ್ ನಾಟ್ ಕಿಂಗ್ ಮೇಕರ್ಸ್, ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವ ದೇಶಪಾಂಡೆ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಕೊಡೋದನ್ನು ಕಲಿಯಿರಿ ಎಂದು ಹೇಳಿದರು.

Facebook Comments

comments