LATEST NEWS
ಹುಂಡಿಗಾಗಿ ಅರ್ಚಕರ ಕೊಲೆ – ಇದೊಂದು ಹೇಯ ಕೃತ್ಯ
ಉಡುಪಿ ಸೆಪ್ಟೆಂಬರ್ 11: ಮಂಡ್ಯ ಜಿಲ್ಲೆ ಅರ್ಕೇಶ್ವರ ದೇವಸ್ಥಾನ ದಲ್ಲಿ ಮೂವರ ಹತ್ಯೆ ಪ್ರಕರಣವನ್ನು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯವಾಗಿದ್ದು, ದುಷ್ಕರ್ಮಿಗಳು ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸಲಾಗುವುದು ಎಂದು ಕೋಟ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅರ್ಘೇಶ್ವರ ದೇವಸ್ಥಾನದ ಇಬ್ಬರು ಕಾವಲುಗಾರರು, ಓರ್ವ ಅರ್ಚಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ದೇವಸ್ಥಾನದ ಹುಂಡಿ ದೋಚಿಕೊಂಡು ಹೋಗಿದ್ದಾರೆ. ಇದು ಅತ್ಯಂತ ಹೇಯ ಕೃತ್ಯವಾಗಿದ್ದು, ರಾಜ್ಯ ಸರ್ಕಾರ ಈ ಘಟನೆಯನ್ನು ಖಂಡಿಸುತ್ತೆ ಎಂದು ಹೇಳಿದರು.
ಈಗಾಗಲೇ ಗೃಹ ಸಚಿವರು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಬಗ್ಗೆ ಭರವಸೆ ನೀಡಿದ್ದಾರೆ. ಸಿಎಂ ಯಡ್ಯೂರಪ್ಪ ಗಮನಕ್ಕೂ ವಿಚಾರ ಬಂದಿದ್ದು, ಸಂತ್ರಸ್ಥ ಕುಟುಂಬ ಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಲು ಹೇಳಿದ್ದಾರೆ. ಈ ಹಿನ್ನಲೆ ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು. ನಾಳೆ ಸ್ಥಳ ಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
Facebook Comments
You may like
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
-
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ
-
ಮಧ್ಯರಾತ್ರಿಯೂ ಕೆಲಸ ಮಾಡುವ ಮಂಗಳೂರಿನ ಸಬ್ ರಿಜಿಸ್ಟರ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಭೇಟಿ
-
ಮೊಬೈಲ್ ಇಯರ್ ಪೋನ್ ವೈರ್ ನಿಂದ ತನ್ನ ನವಜಾತ ಶಿಶುವನ್ನು ಕೊಲೆಗೈದ ಪಾಪಿ ತಾಯಿ
-
ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿದ ಗಂಡ
-
ಏಷ್ಯಾದಲ್ಲಿ ಗೊರಿಲ್ಲ ಸಂತತಿ ಇಲ್ಲ…ಕತ್ತಲಲ್ಲಿ ಕರಡಿ ಕಂಡು ಗೊರಿಲ್ಲ ಎಂದಿರಬಹುದು…..!!
You must be logged in to post a comment Login