ಮಿಲ್ಕ್ ಮಾಸ್ಟರ್ ಖ್ಯಾತಿಯ ರಾಘವ ಗೌಡ ಪಲ್ಲತ್ತಡ್ಕ ನಿಧನ

ಸುಳ್ಯ ಮಾರ್ಚ್ 10: ಹಾಲು ಕರೆಯುವ ಯಂತ್ರ ಸಂಶೋಧಿಸಿ ಮಿಲ್ಕ್ ಮಾಸ್ಟರ್ ಎಂದು ಹೆಸರುವಾಸಿಯಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ರಾಘವ ಗೌಡ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮ್ಮ ಹಾಲು ಕರೆಯುವ ಯಂತ್ರ ಸಂಶೋಧನೆ ಹಾಗೂ ಮಾರಾಟದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ರಾಘವ ಗೌಡ‌ರ ಸಾಧನೆಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು.

ಸುಳ್ಯದ ಪಲ್ಲತ್ತಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡೇ ಹೈನುಗಾರಿಕೆಯಲ್ಲಿ ಆಧುನೀಕತೆಯನ್ನು ಪರಿಚಯಿಸಿದ ಕೀರ್ತಿ ಇವರದ್ದಾಗಿದ್ದು, ಇವರು ಸಂಶೋಧಿಸಿದ ಹಾಲು ಕರೆಯುವ ಯಂತ್ರಗಳಿಗೆ ವಿದೇಶಗಳಿಂದಲೂ ಅಪಾರ ಬೇಡಿಕೆಯಿತ್ತು.

ಹಳ್ಳಿಯಲ್ಲಿದ್ದುಕೊಂಡೇ ತನ್ನ ಸಂಶೋಧನೆಯನ್ನು ಜಗತ್ತಿನಲ್ಲಿ ಹರಡುವಂತೆ ಮಾಡಿ, ಹೈನುಗಾರಿಕೆಯನ್ನು ಆಧುನೀಕರಣಕ್ಕೆ ಮುಂದಾಗಿದ್ದರು.