ಮೆಕ್ಸಿಕೋ ಡಿಸೆಂಬರ್ 16: ಮೆಕ್ಸಿಕೋದಲ್ಲಿ ಖಾಸಗಿ ಜೆಟ್ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ 7 ಮಂದಿ ಪ್ರಯಾಣಿಕರು ಸಾವನಪ್ಪಿದ್ದಾರೆ.

ಈ ಖಾಸಗಿ ಜೆಟ್ ಅಕಪುಲ್ಕೊದಿಂದ ಹೊರಟು, ಮೆಕ್ಸಿಕೊ ಸಿಟಿ ಪಶ್ಚಿಮಕ್ಕೆ ಸುಮಾರು 31 ಮೈಲಿ ದೂರದಲ್ಲಿರುವ ಟೊಲುಕಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಆದರೆ, ವಿಮಾನ ನಿಲ್ದಾಣದಿಂದ ಸುಮಾರು ಮೂರು ಮೈಲಿ ದೂರದಲ್ಲಿರುವ ತೆರಳುತ್ತಿತ್ತು. ಇದು ಮಾನ ನಿಲ್ದಾಣದಿಂದ ಸುಮಾರು ಮೂರು ಮೈಲಿ ದೂರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಪುಟ್ಬಾಲ್ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡುವ ವೇಳೆ ವ್ಯಾಪಾರ ಕಟ್ಟಡದ ಲೋಹದ ಮೇಲ್ಛಾವಣಿಗೆ ಅಪ್ಪಳಿಸಿ ದೊಡ್ಡ ಬೆಂಕಿ ಹತ್ತಿಕೊಂಡಿದೆ.
ವಿಮಾನದಲ್ಲಿ ಎಂಟು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಆದರೆ, ದುರ್ಘಟನೆಯ ನಂತರ ಹಲವು ಗಂಟೆಗಳ ನಂತರವೂ ಕೇವಲ 7 ಜನರ ಮೃತದೇಹವನ್ನು ಮಾತ್ರ ಪತ್ತೆಹಚ್ಚಲಾಗಿದೆ. ಇನ್ನು ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.



