Connect with us

    UDUPI

    ಕುಗ್ರಾಮಗಳಿಗೆ ವರವಾದ ಮೇಘಾಲಯ ‌ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ

    ಉಡುಪಿ : ರಾಜ್ಯದ ಕುಗ್ರಾಮಗಳಲ್ಲಿ ಸರಿಯಾದ ಸೇತುವೆ ಇಲ್ಲದೆ ನದಿ, ತೊರೆ ದಾಟಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇರುವ ಸುದ್ದಿಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ತಂಡ ಪ್ರಾಕೃತಿಕ ವಸ್ತಗಳನ್ನೇ ಬಳಸಿಕೊಂಡು ಅಂದವಾದ ಮೇಘಾಲಯ ‌ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ ನಿರ್ಮಾಣ ಮಾಡ್ತಿದೆ.


    ದಿನವಿಡೀ ಸುರಿಯುವ ಧಾರಾಕಾರ ಮಳೆ.. ಗುಡ್ಡ ಪ್ರದೇಶದಲ್ಲಿ ಹರಿಯುನ ಝರಿ, ತೊರೆಗಳು.. ಹಚ್ಚ ಹಸುರಿನ ದಟ್ಟ ಕಾಡು, ವಾವ್ ಎಷ್ಟು ಚಂದ ಅಲ್ವಾ.. ಆದ್ರೆ ರಭಸವಾಗಿ ಹರಿಯುವ ಈ ತೊರೆಗಳನ್ನು ದಾಟುವುದೇ ದೊಡ್ಡ ಸಾಹಸ.. ಇದಕ್ಕಂತಲೇ ಕಾಂಕ್ರೀಟ್ ಸೇತುವೆ ಬಂದು ಮರದ ಸೇತುವೆ ಕಾಣ ಸಿಗೋದು ತೀರಾ ಅಪರೂಪ. ಮರದ ಸೇತುವೆ ನಿರ್ಮಾಣ ಮಾಡುವವರು ಗ್ರಾಮೀಣ ಭಾಗದಲ್ಲೂ ವಿರಳವಾಗಿದ್ದಾರೆ ಕಾಂಕ್ರೀಟ್ ಕಾಡುಗಳಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಸೌಂದರ್ಯಕ್ಕೆ ಹೊಸ ರೂಪ ನೀಡಿ, ಮರದ ಸೇತುವೆ ನಿರ್ಮಾಣ ಮಾಡುವ ಗ್ರಾಮೀಣ ಕೌಶಲವನ್ನು ಉತ್ತೇಜಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಮಣ್ಣಪಾಪು ಮನೆ ಹಾಗೂ ಪ್ರಾಚಿ ಪ್ರತಿಷ್ಠಾನ ವತಿಯಿಂದ “ಸೇತು ಬಂಧ” ಎನ್ನುವ ಅಭಿಯಾನ ಶುರುಮಾಡಿ, ಗ್ರಾಮೀಣ ಭಾಗದ‌ ತೊರೆಗಳಿಗೆ ಮೇಘಾಲಯ ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ…


    ಜೀವನದ ಜಂಜಾಟ, ಆದುನಿಕ ಶೈಲಿ ಇವುಗಳಿಂದ ನಮ್ಮಲ್ಲಿನ ಕೌಶಲ್ಯ ನಶಿಸಿ ಹೋಗುತ್ತಿರು ಈ ಕಾಲಘಟ್ಟದಲ್ಲಿ ಪ್ರತಿಷ್ಠಾನದವರು ಸ್ಥಳೀಯವಾಗಿ ಸಿಗುವ ಅಡಕೆ ಮರ ಹಾಗೂ ಇತರೆ ಕಾಡಿನ ಬೀಳುಗಳನ್ನು ಬಳಸಿ ಆಕರ್ಷಕವಾಗಿ ಮರದ ಸೇತುವೆ ನಿರ್ಮಾಣ ಮಾಡುತ್ತಿದ್ದು, ಕಾರ್ಕಳ ತಾಲೂಕಿನ ಮಾಳ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇಂತಹ ಮೇಘಾಲಯ ಮಾದರಿ ಸೇತುವೆ ನಿರ್ಮಾಣ ಮಾಡುವ ಉದ್ದೇಶ ಪ್ರತಿಷ್ಠಾನದ್ದು. ಮಕ್ಕಳು ನಡುದುಕೊಂಡು ಹೋಗುವಾಗ ಯಾವುದೇ ಅಪಾಯ ಸಂಭವಿಸದಂತ ಸೇತುವೆ, ಜಾನುವಾರುಗಳಿಗೂ ಹೋಗಲು ಅನುಕೂಲ ಆಗುವ ಸೇತುವೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ.. ಸದ್ಯ ಮಾಳ ಪರಿಸರದಲ್ಲೇ ಸೇತುವೆ 30 ಅಡಿ ಉದ್ದ ಹಾಗೂ 3 ಅಡಿ ಅಗಲದ ಸೇತುವೆ ನಿರ್ಮಾಣ ಮಾಡಿದ್ದು ಎರಡು, ಅವಶ್ಯಕತೆ ಇದ್ದವರು ತಿಳಿಸಿದ್ರೆ ಅವರಿಗೂ ನಿರ್ಮಿಸಿ ಕೊಡುವ ಇಚ್ಚೆ ಹೊಂದಿದ್ದಾರೆ..


    ಒಟ್ಟಾರೆಯಾಗಿ ಕಾಂಕ್ರೀಟ್ ಸೇತುವೆಗಳೇ ಹೆಚ್ಚಾಗಿರುವಾಗ, ಪ್ರಾಕೃತಿಕವಾಗಿ ಸಿಗುವ ವಸ್ತುಗಳು ಬಳಸಿ ಸೇತುವೆ ನಿರ್ಮಾಣ ಮಾಡುದ್ದರಿಂದ ಗ್ರಾಮೀಣ ಕೌಶಲಗಳ ಬೆಳೆದಂತಾಗಿ ನೋಡುದಕ್ಕೂ ಆಕರ್ಷಕವಾಗಿ ಕಾಣುತ್ತೆ..

     

    Share Information
    Advertisement
    Click to comment

    You must be logged in to post a comment Login

    Leave a Reply