MANGALORE
MCC ಮ್ಯಾನ್ ಹೋಲ್ ಪ್ರಕರಣ :CPIM ತೀವ್ರ ಖಂಡನೆ, ಇಂದು ಪ್ರತಿಭಟನೆ
MCC ಮ್ಯಾನ್ ಹೋಲ್ ಪ್ರಕರಣ :CPIM ತೀವ್ರ ಖಂಡನೆ, ಇಂದು ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 21 : ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಕಗೊಂಡಿರುವ ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ ಮೆರೆದಿರುವ ಮಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (CPIM) ಮಂಗಳೂರು ನಗರ ದಕ್ಷಿಣ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನುಕ್ರಮವನ್ನು ಜರುಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಅದು ಒತ್ತಾಯಿಸಿದೆ.
ಯಾವುದೇ ಕಾರಣಕ್ಕೂ ಪೌರಕಾರ್ಮಿಕರನ್ನು ಡ್ರೈನೇಜ್‍ನ ಮ್ಯಾನ್‍ಹೋಲ್‍ಗಳಿಗೆ ಇಳಿಸಿ ದುಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದ್ದರೂ, ಪಾಲಿಕೆ ಅವುಗಳನ್ನೆಲ್ಲ ಗಾಳಿಗೆ ತೂರಿದೆ ಎಂದು ಅದು ಆರೋಪಿಸಿದೆ.
ಒಂದು ವೇಳೆ ಅಂತಹ ಸಂದರ್ಭ ಒದಗಿದರೆ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಬಳಿಕ ಎಲ್ಲಾ ರಕ್ಷಣಾತ್ಮಕ ಕವಚಗಳೊಂದಿಗೆ ಕಾರ್ಯ ಸಾಗಬೇಕಾಗಿದೆ.
ಆದರೆ ಇಲ್ಲಿ ಅದ್ಯಾವುದನ್ನೂ ಲೆಕ್ಕಿಸದೆ ಕಾರ್ಮಿಕರನ್ನು ತೀರಾ ಹೀನಾಯವಾಗಿ ಬಳಸಿಕೊಳ್ಳಲಾಗಿದೆ ಎಂದು CPIM ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲು ಒತ್ತಾಯಿಸಿ ಇಂದು ಮಂಗಳೂರು ಮಹಾನಗರ ಪಾಲಿಕೆ ಕಛೇರಿಯೆದುರು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದೆ.
Facebook Comments
You may like
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಸಾಸ್ತಾನ ನವಯುಗ ಟೋಲ್ ಗೇಟ್ ವಿರುದ್ದ ಸ್ಥಳೀಯರ ಬೃಹತ್ ಪ್ರತಿಭಟನಾ ಸಭೆ
ಟಾಪ್ ಲೆಸ್ ಪೋಟೋ ದಲ್ಲಿ ಗಣೇಶ ವಿಗ್ರಹ..ಪಾಪ್ ಸಿಂಗರ್ ರಿಹಾನ್ ವಿರುದ್ದ ಆಕ್ರೋಶ
ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ
ಬಿಲ್ಲವ ಸಮುದಾಯಕ್ಕೆ ಅವಹೇಳನ ಪ್ರಕರಣ: ಬಹಿರಂಗ ಕ್ಷಮೆಯಾಚಿಸಿದ ಜಗದೀಶ್ ಅಧಿಕಾರಿ ..!
ಬಹುಗ್ರಾಮ ಕುಡಿಯುವ ನೀರು ಘಟಕ ಪರಿಶೀಲನೆ ನೆಪದಲ್ಲಿ ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
You must be logged in to post a comment Login