Connect with us

    LATEST NEWS

    ಜುಲೈ 2ರಂದು ಪಿಲಿಕುಳದಲ್ಲಿ ಮತ್ಸ್ಯೋತ್ಸವ-2023

    ಮಂಗಳೂರು,ಜೂನ್ 29:- ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಜುಲೈ 2ರ ಭಾನುವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಲೇಕ್ ಗಾರ್ಡನ್‍ನಲ್ಲಿ ಮತ್ಯೋತ್ಸವವನ್ನು ಏರ್ಪಡಿಸಲಾಗಿದೆ.


    ಅಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕೆರೆಯಲ್ಲಿ ಬೆಳೆಸಿದ ರೋಹು, ಕಾಟ್ಲಾ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದು ಹಾಗೂ ಮೀನುಗಾರಿಕಾ ಇಲಾಖೆಯ ವತಿಯಿಂದ ಸಮುದ್ರದ ತಾಜಾ ಮೀನುಗಳು ಮತ್ತು ಅವುಗಳ ಖಾದ್ಯಗಳ ಮಾರಾಟ ವ್ಯವಸ್ಥೆಯನ್ನು ಕೆರೆಯ ದಂಡೆಯಲ್ಲಿ ಏರ್ಪಡಿಸಲಾಗಿದೆ. ಅಲಂಕಾರಿಕ ಮೀನುಗಳು ಮಾರಾಟಕ್ಕೆ ಲಭ್ಯವಿದೆ. ಮೀನುಗಳ ಮಾರಾಟ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಪ್ರಾರಂಭವಾಗಲಿದೆ ಹಾಗೂ ಮೀನು ಲಭ್ಯವಿರುವ ತನಕ ಮುಂದುವರಿಯಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply