ಬೆಳ್ತಂಗಡಿ ಸೆಪ್ಟೆಂಬರ್ 18: ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಸಾಕ್ಷಿ ದೂರುದಾರನಾಗಿದ್ದು, ಇದೀಗ ಅರೆಸ್ಟ್ ಆಗಿರುವ ಚಿನ್ನಯ್ಯನನ್ನು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗಿದೆ.


ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಆಗಮಿಸಿದ್ದ ಚಿನ್ನಯ್ಯನನ್ನು ಬಳಿಕ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಎಸ್ ಐಟಿ ಆರೋಪಿಯನ್ನಾಗಿಸಿ ಜೈಲಿಗೆ ತಳ್ಳಿದೆ. ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಇಂದು ನ್ಯಾಯಾಲಯದ ಹೇಳಿಕೆ ನೀಡುವ ಸಲುವಾಗಿ ಬೆಳ್ತಂಗಡಿಗೆ ಕರೆತರಲಾಗಿತು. ಇಂದು ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಮುಂದೆ ಚಿನ್ನಯ್ಯನನ್ನು ಪೊಲೀಸರು ಹಾಜರುಪಡಿಸಿದ್ದಾರೆ. ಮುಚ್ಚಿದ ನ್ಯಾಯಾಲಯದೊಳಗೆ ನ್ಯಾಯಾಧೀಶರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಳಿಕ ಮತ್ತೆ ಶಿವಮೊಗ್ಗೆ ಜೈಲ್ ಗೆ ಚಿನ್ನಯ್ಯ ಶಿಫ್ಟ್ ಮಾಡಲಾಗಿದೆ.


ಪ್ರತೀಭಾರಿಯೂ ಬರುವಾಗ ಮಾಸ್ಕ್ ಹಾಕಿಕೊಂಡಿರುತ್ತಿದ್ದ ಚಿನ್ನಯ್ಯ ಇದೇ ಮೊದಲ ಬಾರಿಗೆ ಮಾಸ್ಕ ತೆಗೆದು ಪೊಲೀಸ್ ವಾಹನ ಹತ್ತಿದ್ದಾನೆ.

Share Information