Connect with us

    DAKSHINA KANNADA

    ಕೊರೊನಾದಿಂದ ತಪ್ಪಿಸಿಕೊಳ್ಳಲು ನಾಯಿಗೂ ಮಾಸ್ಕ್….!!

    ಪುತ್ತೂರು ಎಪ್ರಿಲ್ 29: ಕೊರೋನಾ ಎರಡನೇ ಅಲೆಯಿಂದಾಗಿ ಜನ ತತ್ತರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 14 ದಿನಗಳ ಕೊರೊನಾ ಕರ್ಫ್ಯೂ ಘೋಷಿಸಿದೆ. ಪ್ರತಿಯೋರ್ವರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವ ಘೋಷಣೆಯನ್ನು ನಿರಂತರ ಘೋಷಿಸುತ್ತಾ ಬಂದಿದೆ. ಆದರೆ ಕೆಲವರು ಮಾಸ್ಕ್ ಧರಿಸುವಲ್ಲಿ ಉಡಾಫೆ ತೋರಿಸುತ್ತಿರುವುದು ಅಲ್ಲಲ್ಲಿ ಕಂಡು ಬಂದಿತ್ತಾದರೂ, ಶ್ವಾನವೊಂದು ಮಾಸ್ಕ್ ಧರಿಸಿ ಎಲ್ಲರಿಗೂ ಮಾದರಿಯಾಗಿರುವುದು ಕಂಡು ಬಂದಿದೆ.


    ಹೌದು, ಇಲ್ಲಿನ ದರ್ಬೆ ಜಂಕ್ಷನ್‌ನಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಬೆಳಿಗ್ಗೆ ಹತ್ತು ಗಂಟೆಯ ನಂತರ ಅನಗತ್ಯ ವಾಹನ ಓಡಾಟವನ್ನು ನಿಯಂತ್ರಿಸುತ್ತಿದ್ದಾಗ ಕಂಡು ಬಂದ ದೃಶ್ಯವಿದು. ಸರಕಾರ ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ದರ್ಬೆ ಮುಖೇನ ಆಗಮಿಸಿದ ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲಕರಾದ ಪ್ರವೀಣ್ ಡಿ’ಸೋಜರವರು ತಮ್ಮ ಪ್ರೀತಿಯ ಎರಡೂವರೆ ವರ್ಷದ ಪ್ರೀತಿಯ `ಹಗ್’ ನಾಮಾಂಕಿತ ಶ್ವಾನದ ಮುಖಕ್ಕೆ ಮಾಸ್ಕ್ ಧರಿಸಿರುವುದು ಸ್ಥಳದಲ್ಲಿದ್ದ ಪೊಲೀಸರ ಹಾಗೂ ಪತ್ರಿಕಾ/ಮೀಡಿಯಾ ವರದಿಗಾರರ ಕುತೂಹಲಕ್ಕೆ ಎಡೆಮಾಡಿತ್ತು.

    ಸರಕಾರದ ಮಾರ್ಗಸೂಚಿಗಳನ್ನು ಜನಸಾಮಾನ್ಯರೇ ಉಲ್ಲಂಘಿಸುವ ಈ ಸಂದರ್ಭದಲ್ಲಿ ಮಾತನಾಡಲು ಬಾರದ ಶ್ವಾನವೊಂದು ಮಾಸ್ಕ್ ಧರಿಸಿರುವುದು ಮಾನವನಿಗೆ ಮಾದರಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply