Connect with us

    LATEST NEWS

    ಕರೋನಾ ಭೀತಿ ಉಡುಪಿಯಲ್ಲಿ ಮಾಸ್ಕ್ ಹಾಗೂ ಸಾನಿಟೈಜರ್ ಗಳ ಬೆಲೆ ಗಗನಕ್ಕೆ….!

    ಕರೋನಾ ಭೀತಿ ಉಡುಪಿಯಲ್ಲಿ ಮಾಸ್ಕ್ ಹಾಗೂ ಸಾನಿಟೈಜರ್ ಗಳ ಬೆಲೆ ಗಗನಕ್ಕೆ….!

    ಉಡುಪಿ ಮಾ.6: ದೇಶದಲ್ಲಿ ಕರೋನಾ ವೈರಸ್ ಆತಂಕ ಹೆಚ್ಚಾಗುತ್ತಿದ್ದಂತೆ ಮಾಸ್ಕ್ ಹಾಗೂ ಸಾನಿಟೈಜರ್ ಗಳ ಬೆಲೆ ಗಗನಕ್ಕೇರಿದ್ದು, ಕೆಲವು ಕಡೆ ನೋ ಸ್ಟಾಕ್ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲೂ ಕರೋನಾ ಪ್ರಕರಣ ಪತ್ತೆಯಾದ ನಂತರ ಮಾಸ್ಕ್ ಹಾಗೂ ಹ್ಯಾಂಡ್ ಸಾನಿಟೈಜರ್ ಬೇಡಿಕೆ ಏರಿದ್ದು, ಮಾಸ್ಕ್ ನ ಬೆಲೆಯಲ್ಲೂ 100 ರೂಪಾಯಿ ಹೆಚ್ಚಳ ಆಗಿದೆ.

    ಉಡುಪಿ ನಗರದಲ್ಲಿ ಸಿಂಗಲ್ ಲೇಯರ್ ಮಾಸ್ಕ್ ಗಳು ಖಾಲಿಯಾಗಿದೆ. ಸಪ್ಲೈ ಕೂಡ ಇಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಟಿ95 ಮತ್ತು ತ್ರಿಪಲ್ ಲೇಯರ್ ಮಾಸ್ಕ್ ಗಳು ಮಾತ್ರ ಮೆಡಿಕಲ್‍ನಲ್ಲಿ ಲಭ್ಯವಿದೆ. ಕಳೆದ ಎರಡು ದಿನಗಳಿಂದ ಮಾಸ್ಕ್ ನ ಬೆಲೆ ನೂರು ರೂಪಾಯಿ ಹೆಚ್ಚಾಗಿದೆ. 95 ಮಾಸ್ಕ್ 150 ರೂ.ಗೆ ಈ ಹಿಂದೆ ಲಭ್ಯವಾಗುತ್ತಿತ್ತು. ಈಗ 270 ರೂ. ಆಗಿದೆ.

    ತ್ರಿಪಲ್ ಲೇಯರ್ ಮಾಸ್ಕ್ ನ ಬೆಲೆ 70 ರೂ. ನಿಂದ 150 ರೂ.ಗೆ ಹೆಚ್ಚಳವಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಗೆ ವಿಪರೀತ ಬೇಡಿಕೆ ಬಂದಿದ್ದು ಮೆಡಿಕಲ್‍ಗಳಲ್ಲಿ ಸ್ಟಾಕ್ ಇಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply