ಮಾರ್ಚ್ 29 ರಂದು ಕಟಪಾಡಿ ಕಟ್ಟಪ್ಪ ಸಿನೆಮಾ ಥಿಯೇಟರ್ ಗೆ ಗ್ರ್ಯಾಂಡ್ ಎಂಟ್ರಿ

ಮಂಗಳೂರು ಮಾರ್ಚ್ 19: ತುಳು ಚಿತ್ರರಂಗದಲ್ಲಿ ಭಾರಿ ಸೆನ್ಸೆಷನ್ ಸೃಷ್ಠಿಸಿರುವ ಕಟಪಾಡಿ ಕಟ್ಟಪ್ಪ ಚಲನಚಿತ್ರ ಇದೇ ಮಾರ್ಚ್ 29 ರಂದು ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಚಿತ್ರದ ಟ್ರೈಲರ್ ಮೂಲಕ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ಕಟಪಾಡಿ ಕಟ್ಟಪ್ಪ ಸಿನೆಮಾ ನೋಡಲು ಚಿತ್ರ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಭರ್ಜರಿ ಸೆನ್ಸೇಷನ್ ಸೃಷ್ಠಿಸಿರುವ ಕಟಪಾಡಿ ಕಟ್ಟಪ್ಪ ಚಿತ್ರ ಇದೇ ಮಾರ್ಚ್ 29 ರಂದು ತೆರೆ ಕಾಣಲಿದೆ. ಬಿರುವೆರ್ ಕುಡ್ಲ(ರಿ)ನ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನಟನೆಯ, ರಾಜೇಶ್ ಬ್ರಹ್ಮಾವರ ನಿರ್ಮಾಣದ ಹಾಗೂ ಜೆ‌.ಪಿ ತೂಮಿನಾಡ್ ನಿರ್ದೇಶಿಸಿರುವ ಕಟಪಾಡಿ ಕಟ್ಟಪ್ಪ ಚಿತ್ರದಲ್ಲಿ ತುಳು ಚಿತ್ರರಂಗದ ದಿಗ್ಗಜರು ಅಭಿನಯಿಸಿದ್ದಾರೆ.

ಕಟಪಾಡಿ ಚಿತ್ರದ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಪ್ರಚಾರ ಮಾಡಿಕೊಂಡು ಬಂದಿದ್ದ ಚಿತ್ರತಂಡ ಕಟಪಾಡಿ ಕಟ್ಟಪ್ಪದಲ್ಲಿ ಕಟ್ಟಪ್ಪನ ಪಾತ್ರ ಯಾರು ಮಾಡಿರೋದು ಎನ್ನುವ ಗುಟ್ಟು ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ. ಮಾರ್ಚ್ 29 ರಂದು ಈ ಸಿಕ್ರೇಟ್ ಗೆ ತೆರೆ ಬೀಳಲಿದೆ.

ಬ್ರಹ್ಮಾ ವರ್‌ ಮೂವೀಸ್‌ ಲಾಂಛನದಲ್ಲಿ ಮೂಡಿಬಂದಿರುವ ‘ಕಟಪಾಡಿ ಕಟ್ಟಪ್ಪ’ ತುಳು ಚಿತ್ರದ ನಿರ್ಮಾಪಕರು ರಾಜೇಶ್‌ ಬ್ರಹ್ಮಾವರ್. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಛಾಯಾಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದಾರೆ. ಎಡಿಟಿಂಗ ನಲ್ಲಿ ಗಣೇಶ್‌ ನೀರ್ಚಾಲ್ ಇದ್ದರೆ‌, ಸಂಗೀತವನ್ನು ಪ್ರಕಾಶ್‌ ನೀಡಿದ್ದಾರೆ.

ಕಟಪಾಡಿ ಕಟ್ಟಪ್ಪ  ಟ್ರೈಲರ್

ಚಿತ್ರದಲ್ಲಿ ನಾಯಕರಾಗಿ ಬಿರುವೆರ್ ಕುಡ್ಲದ ಉದಯ ಪೂಜಾರಿ ಬಳ್ಳಾಲ್‌ಬಾಗ್‌ ನಾಯಕ ನಟರಾಗಿ ಕಾಣಿಸಿಕೊಂಡಿದ್ದು, ಚರೀಶ್ಮಾ ಆಮೀನ್‌ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರಲ್ಲದೆ ಯಜ್ಞೇಶ್ವರ್‌ ಬರ್ಕೆ, ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಪಮ್ಮಿ ಕೊಡಿಯಾಲ್‌ಬೈಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ದೀಪಕ್‌ ರೈ ಪಾಣಾಜೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್‌ ಪಾಂಡೇಶ್ವರ, ಧೀರಜ್‌ ನೀರುಮಾರ್ಗ, ಪ್ರಶಾಂತ್‌ ಅಂಚನ್‌ ಸಹಿತ ಇನ್ನು ಹಲವು ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.
ಮಾರ್ಚ್ 29 ರಂದು ಜಿಲ್ಲೆಯಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ತುಳು ಚಿತ್ರರಸಿಕರನ್ನು ರಂಜಿಸಲಿದೆ.