ಮತದಾನಕ್ಕಾಗಿ ಮ್ಯಾರಥಾನ್- ಅಧಿಕಾರಿಗಳು, ವಿದ್ಯಾರ್ಥಿಗಳು, ನಾಗರೀಕರಿಂದ ಪಾಲ್ಗೊಳ್ಳುವಿಕೆ

ಮಂಗಳೂರು ಮಾರ್ಚ್ 31: ಮತದಾನ ಜಾಗೃತಿ ಮೂಡಿಸಲು ಮಂಗಳೂರು ಮಹಾನಗರ ಇಂದು ಬೆಳಗ್ಗೆ ಮಂಗಳಾ ಸ್ಟೇಡಿಯಂನಲ್ಲಿ ಅಧಿಕಾರಿಗಳು, ಕ್ರೀಡಾಳುಗಳು, ಜವಾಬ್ದಾರಿಯುತ ನಾಗರೀಕರು ಅತ್ಯುತ್ಸಾಹದಿಂದ ಸೇರಿದ್ದರು.

ಮತದಾನ ನಮ್ಮ ಹಕ್ಕು, ಕರ್ತವ್ಯ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಮಾಡಿ; ಯುವ ಮತದಾರರು ತಾವು ಮತದಾನ ಮಾಡುವುದರೊಂದಿಗೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಓಟದಲ್ಲಿ ಪಾಲ್ಗೊಂಡ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಎಸ್ ಪಿ ಲಕ್ಷ್ಮೀ ಪ್ರಸಾದ್, ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಡಾ ಸೆಲ್ವಮಣಿ ಆರ್., ಎಲ್ಲರೂ ಒಕ್ಕೊರಲಿನಿಂದ ನೆರೆದವರಲ್ಲಿ ಮನವಿ ಮಾಡಿದರು. ಹಿರಿಯ ನಾಗರೀಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನಸೆಳೆದರು.

ಒಟ್ಟು 3 ವಿಭಾಗದಲ್ಲಿ ಸ್ಫರ್ಧೆ ನಡೆಯಿತು ಮೊದಲ ವಿಭಾಗದಲ್ಲಿ 16 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಥಮ ಬಹುಮಾನ ಲಕ್ಷ್ಮಣ ಡಿ.ವೈ.ಇ.ಸಿ, ದ್ವಿತೀಯ ಬಹುಮಾನ ಕೆ. ಹನುಮೇಶ ಆಳ್ವಾಸ್, ತೃತೀಯ ಬಹುಮಾನ ಬಸವರಾಜ್ ಗೋಡಿ, ಚತುರ್ಥ ಬಹುಮಾನ ಪ್ರಶಾಂತ್ ಕುಮಾರ್ ಆಳ್ವಾಸ್, 5ನೇ ಬಹುಮಾನ ಸಚಿನ್ ಮಂಗಳೂರು ಪಡೆದುಕೊಂಡರು..

16 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ದೇವಾಡಿಗ ಆಳ್ವಾಸ್, ದ್ವಿತೀಯ ಬಹುಮಾನ ಪ್ರೀಯಾ ಡಿ ಆಳ್ವಾಸ್, ತೃತೀಯ ಬಹುಮಾನ ಪ್ರಿಯಾಂಕ ಹೆಚ್.ಡಿ ಆಳ್ವಾಸ್, ಚತುರ್ಥ ಬಹುಮಾನ ದೀಕ್ಷಾ ಬಿ ಆಳ್ವಾಸ್, 5ನೇ ಬಹುಮಾನ ಚೈತ್ರಾ ಪಿ. ಆಳ್ವಾಸ್ ಪಡೆದುಕೊಂಡರು.

2ನೇ ವಿಭಾಗದಲ್ಲಿ 16 ವರ್ಷಕ್ಕಿಂತ ಕೆಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಅನಂಜುಮನ್, ದ್ವಿತೀಯ ಬಹುಮಾನ ಧರ್ಮಪ್ಪ ಬಿ. ಆಳ್ವಾಸ್, ತೃತೀಯ ಬಹುಮಾನ ದಶರತ್ ಆಳ್ವಾಸ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ಎನ್.ಸಿ. ಆಳ್ವಾಸ್, ದ್ವಿತೀಯ ಬಹುಮಾನ ವಿಂದ್ಯಾ ಎನ್ ಆಳ್ವಾಸ್, ತೃತೀಯ ಬಹುಮಾನ ಪ್ರಣಮ್ಯ ಎನ್ ಆಳ್ವಾಸ್ ಪಡೆದುಕೊಂಡರು.

ಸಹಾಯಕ ಚುನಾವಣಾಧಿಕಾರಿ ಗಾಯತ್ರಿ ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ ಸೋಜ, ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘುವೀರ್, ಜಿಲ್ಲಾ ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರನ್ನೊಳಗೊಂಡಂತೆ ಹಲವು ಗಣ್ಯರು ಮ್ಯಾರಥಾನ್‍ನಲ್ಲಿ ಪಾಲ್ಗೊಂಡರು.