ತೆಲಿಕೆದ ಬೊಳ್ಳಿ ತುಳು ಚಿತ್ರದ ಹಿರೋಯಿನ್ ಜೊತೆ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಮದುವೆ

ಮಂಗಳೂರು ಅಕ್ಟೋಬರ್ 10: ತೆಲಿಕೆದ ಬೊಳ್ಳಿ ತುಳು ಚಿತ್ರದ ನಟಿ ಆಶ್ರಿತಾ ಶೆಟ್ಟಿ ಜೊತೆ ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ನಟಿ ಅಶ್ರಿತಾ ಶೆಟ್ಟಿ ಹಾಗೂ ಕ್ರಿಕೆಟರ್ ಮನೀಶ್ ಪಾಂಡೆ ಕಳೆದ ಹಲವು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂದು ಗಾಸಿಫ್ ಹರಡಿತ್ತು. ಈಗ ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್ 2ರಂದು 30 ವರ್ಷದ ಮನೀಶ್, 26 ವರ್ಷದ ಆಶ್ರಿತಾ ಜೊತೆ ಮುಂಬೈನಲ್ಲಿ ಮದುವೆ ಆಗಲಿದ್ದಾರೆ.

2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ.

ಮನೀಶ್ ಪಾಂಡೆ ರಣಜಿಯಲ್ಲಿ ಕರ್ನಾಟಕದ ಪರ ಆಡುತ್ತಿದ್ದು, ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮನೀಶ್ ಹಾಗೂ ಆಶ್ರಿತಾ ಮದುವೆಯಲ್ಲಿ ಕೇವಲ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದು, ಎರಡು ದಿನಗಳ ಕಾಲ ಈ ಮದುವೆ ನಡೆಯಲಿದೆ. ಮನೀಶ್ ಮದುವೆಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ.