LATEST NEWS
ಮಣಿಪಾಲದಲ್ಲಿ 10 ಲಕ್ಷ ಮೌಲ್ಯದ MDMA ಡ್ರಗ್ ವಶ
ಉಡುಪಿ ಅಕ್ಟೋಬರ್ 4 : ಡ್ರಗ್ಸ್ ಕುರಿತು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತನಿಖೆ ಚುರುಕುಗೊಂಡಿದ್ದು, ಇದೇ ವೇಳೆ ಸುಮಾರು 10 ರೂ. ಮೌಲ್ಯದ ಡ್ರಗ್ಸ್‍ನ್ನು ಮಣಿಪಾಲದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಡ್ರಗ್ಸ್ ತಂಧೆ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ 10 ಲಕ್ಷ ರೂ. ಮೌಲ್ಯದ ಎಂಡಿಎಂ ಎ ಡ್ರಗ್ ವಶ ಪಡೆಯಲಾಗಿದ್ದು, ಉತ್ತರ ಭಾರತ ಮೂಲದ ಆರೋಪಿ ಯುವಾಂಶು ಜೋಶಿ(20)ಯನ್ನು ಬಂಧಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಮಣಿಪಾಲ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದು ಎಂಡಿಎಂಎ ಮಾದಕ ಡ್ರಗ್ ಎಂದು ಗುರುತಿಸಲಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೂ ಹಲವರಿಗಾಗಿ ಗಾಳ ಬೀಸಿದ್ದಾರೆ. ಹೀಗಿರುವಾಗಲೇ ಮಣಿಪಾಲದಲ್ಲಿ ಇದೀಗ 10 ಲಕ್ಷ ರೂ.ಗಳ ಡ್ರಗ್ಸ್ ಪತ್ತೆಯಾಗಿದೆ.
Facebook Comments
You may like
-
ಅಪ್ರಾಪ್ತ ಬಾಲಕಿಯ ಬೆತ್ತಲೆ ಪೋಟೋ ಬಳಸಿ ಲವ್ ಜಿಹಾದ್ ಗೆ ಯತ್ನ – ಆರೋಪಿ ಸೆರೆ
-
ಮಂಗಳೂರು ಖಾಸಗಿ ಕಾಲೇಜಿನ ರಾಗಿಂಗ್ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಪಿಪಿಇ ಕಿಟ್ ಧರಿಸಿ 20 ಕೋಟಿ ಮೌಲ್ಯದ ಚಿನ್ನ ಕದ್ದು ಸಿಕ್ಕಿಬಿದ್ದ ಖದೀಮ!
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
You must be logged in to post a comment Login