LATEST NEWS
3 ದಶಕಗಳ ಹಿಂದಿನ ಹಲ್ಲೆ ಪ್ರಕರಣದ ಆರೋಪಿಯನ್ನು 33 ವರ್ಷಗಳ ಬಳಿಕ ಬಂಧಿಸಿದ ಮಣಿಪಾಲ ಪೊಲೀಸರು..!
ಉಡುಪಿ : ಮೂರು ದಶಕಗಳ ಹಿಂದೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿಯನ್ನು ಉಡುಪಿ ಮಣಿಪಾಲ ಪೊಲೀಸರು ಘಟನೆ ನಡೆದ 33 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಬಡಗಬೆಟ್ಟು ಗ್ರಾಮದ ಗಣೇಶ್ ಪ್ರಭು(54) ಬಂಧಿತ ಆರೋಪಿಯಾಗಿದ್ದಾನೆ. 1992ರ ಫೆ.13ರಂದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಗಣೇಶ್ ಪ್ರಭು ಸಹಿತ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಗಣೇಶ್ ಪ್ರಭು ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದರು. ಆದರೆ ಗಣೇಶ್ ಪ್ರಭು ಸುಮಾರು 33 ವರ್ಷಗಳ ಹಿಂದೆ ಕೆಲಸದ ಬಗ್ಗೆ ಬೆಂಗಳೂರಿಗೆ ಹೋಗಿ ಬಳಿಕ ತಲೆ ಮರೆಸಿಕೊಂಡಿದ್ದನು. ಆರೋಪಿ ಪತ್ತೆಗೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಉಡುಪಿ ಎಸ್ಪಿ ಡಾ.ಅರುಣ ಕುಮಾರ್ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ದೇವರಾಜ ಟಿ.ವಿ ನಿರ್ದೇಶನದಂತೆ ಮಣಿಪಾಲ ಎಸ್ಸೈ ರಾಘವೇಂದ್ರ ಸಿ. ಮತ್ತು ಸಿಬ್ಬಂದಿ ಪ್ರಸನ್ನ ಕಾರ್ಯಾಚರಣೆ ನಡೆಸಿ ಆರೋಪಿ ಗಣೇಶ್ ಪ್ರಭುವನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
You must be logged in to post a comment Login