ಮಣಿಪಾಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಅವಸ್ಥೆ

ಉಡುಪಿ ಮೇ 10: ಮಣಿಪಾಲದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಭಾರಿ ಸಮಸ್ಯೆ ಅನುಭವಿಸುವಂತಾಗಿದ್ದು, ಭಾರಿ ಗಾತ್ರದ ವಾಹನಗಳು ತಲೆ ಮೇಲೆ ಮಾಡಿ ನಿಲ್ಲೋ ಸ್ಥಿತಿಗೆ ಬಂದು ನಿಂತಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ‌ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಅಪಾಯಕಾರಿಯಂದ್ರೆ ಭಾರೀ ಗಾತ್ರದ ವಾಹನಗಳು ತಲೆ ಮೇಲೆ‌ ಮಾಡಿ‌ ನಿಲ್ಲೋ‌ ಸ್ಥಿತಿಗೆ ಬಂದು ನಿಂತಿದೆ. ಹೌದು ಮಣಿಪಾಲದಲ್ಲಿ ನಡೆಯುತ್ತಿರೋ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರೋ ಪರಿಣಾಮ‌ ಪ್ರತೀ ನಿತ್ಯ ಒಂದಲ್ಲ ಒಂದು ಅವಘಡ‌ ನಡೆಯುತ್ತಲೇ ಇದೆ.

ಮಣಿಪಾಲದಲ್ಲಿ ಧಿಡೀರ್ ಎದುರಾಗೋ ಮಣ್ಣಿನ ಏರು‌ ರಸ್ತೆಯಿಂದ ಭಾರೀ ಗಾತ್ರದ‌ ವಾಹನಗಳು ಸಿಲುಕಿ ಅಪಘಾತಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಆಯಿಲ್‌ ಟ್ಯಾಂಕರ್ ಏರಿನಲ್ಲಿ ಮುಂದಕ್ಕೆ‌ ಚಲಿಸಲಾಗದೆ ಆಯಿಲ್‌ ಸೋರಿಕೆಯಾಗಿತ್ತು. ಇಂದು ಮತ್ತೆ ಮರದ ದಿಣ್ಣೆ ಸಾಗಿಸೋ ಲಾರಿ ಏರಿನಲ್ಲಿ ಸಿಲುಕಿ ಮೇಲೆ ಕೆಳಗಾಗಿದೆ. ಹೀಗೆ ಭಾರೀ ವಾಹನಗಳ ಅವಘಡದಿಂದ ಟ್ರಾಫಿಕ್ ಜಾಮ್ ಗೂ ಕಾರಣವಾಗಿದೆ.

ಜಿಲ್ಲಾಧಿಕಾರಿ ಹೆಪ್ಸಿಬಾ‌ ಹಾಗೂ ಎಸ್ಪಿ ‌ನಿಶಾ ಸ್ಥಳಕ್ಕೆ‌ ಆಗಮಿಸಿ ಹೆದ್ದಾರಿ ಕಾಮಗಾರಿ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಎಚ್ಚರಿಕೆ‌ ನೀಡಿದ್ರು ಅಧಿಕಾರಿಗಳು ಮಾತ್ರ ಕಾಮಗಾರಿ ವಿಳಂಭ ಮಾಡುತ್ತಲೇ ಇದ್ದಾರೆ.ಇದು‌‌ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ‌ ಕಾರಣವಾಗಿದೆ.

VIDEO