MANGALORE
ಮ್ಯಾನ್ ಹೋಲ್ ಇಳಿದು ಚರಂಡಿ ಹೂಳೆತ್ತಿದ ಕಾರ್ಪೋರೇಟರ್ !
ಮಂಗಳೂರು, ಜೂನ್ 24 : ಕಾರ್ಮಿಕರೇ ಮ್ಯಾನ್ ಹೋಲ್ ಇಳಿಯಲು ಹಿಂದೆ ಮುಂದೆ ನೋಡಬೇಕಿದ್ದರೆ ಇಲ್ಲೊಬ್ಬರು ಕಾರ್ಪೊರೇಟರ್ ಮ್ಯಾನ್ ಹೋಲ್ ಇಳಿದು ಚರಂಡಿ ಸ್ವಚ್ಚ ಮಾಡಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸೂಟು ಬೂಟು ಹಾಕಿ ಪೋಸು ನೀಡುವ ಕಾರ್ಪೊರೇಟರ್ ಗಳ ಮಧ್ಯೆ ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡವರು ಮಂಗಳೂರಿನ ಕದ್ರಿ ಕಂಬಳ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ಮನೋಹರ ಶೆಟ್ಟಿ.
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾಗಿತ್ತು. ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ. ಈ ವೇಳೆ, ಅಲ್ಲಿದ್ದ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ವಿವರಿಸಿದ್ದಾರೆ. ಇಷ್ಟಾದ ಮೇಲೂ ತೊಡಕನ್ನು ಸರಿಪಡಿಸಲು ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿಕೊಂಡು ಚೇಂಬರ್ ಒಳಗಡೆ ಇಳಿದು ತಾನೇ ಸ್ವತಃ ಕೆಲಸ ಮಾಡಿ ಚರಂಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನಪರ ಜನಪ್ರತಿನಿಧಿ ಯಾವ ರೀತಿ ಇರಬೇಕು, ಇರಬಹುದು ಎಂಬುದಕ್ಕೆ ಕಾರ್ಪೊರೇಟರ್ ಮನೋಹರ ಶೆಟ್ಟಿ ಅದ್ಭುತ ನಿದರ್ಶನವಾಗಿ ತೋರಿದ್ದಾರೆ.
Facebook Comments
You may like
ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್
ಮದುವೆ ಸಂಭ್ರಮ ಮಗಿಯುವ ಮೊದಲೆ ಹೃದಯಾಘಾತಕ್ಕೆ ಬಲಿಯಾದ ನವವಧು
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ..ಮುಂದುವರೆದ ವಿಕೃತಿ
ಕಾಸರಗೋಡು ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ – ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಡಿಜಿಟಲ್ ಇಂಡಿಯಾದಲ್ಲಿ ಒಂದು ಆಧಾರ್ ಕಾರ್ಡ್ ಬರಲು ಬೇಕಾದ ಸಮಯ ಬರೋಬ್ಬರಿ 5 ವರ್ಷ…!!
You must be logged in to post a comment Login