ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯ U M ಮೊಹಮ್ಮದ್ ಅಲಿ ( U M Ali) (ಯು.ಎಮ್.ಅಲಿ) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮಂಗಳೂರು :  ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯ U M ಮೊಹಮ್ಮದ್ ಅಲಿ ( U M Ali) (ಯು.ಎಮ್.ಅಲಿ) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತ ಮುಹಮ್ಮದ್ ಅಲಿ ಅವರು ಮೂವರು ಹೆಣ್ಮಕ್ಕಳು, ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ಧಾರೆ.

ದೆಹಲಿ ಪ್ರವಾಸಕ್ಕೆ ಹೋಗಿದ್ದ ಅಲಿ ಅಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಉಳ್ಳಾಲ ಹಮ್ಮಬ್ಬ ಅವರ ಪುತ್ರನಾದ ಮುಹಮ್ಮದ್ ಅಲಿ ಅವರು  ಕೆಲಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು ಈ ಹಿಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಸಮಾಜ ಸೇವೆಯಲ್ಲಿ ತನ್ಬನ್ನು ತಾನು ತೊಡಗಿಸಿಕೊಂಡಿದ್ದು ಬಡವರ ಬಗ್ಗೆ ಅಪಾರ ಖಾಳಾಜಿ ಹೊಂದಿದ್ದರು. ಎರಡು ದಿನದ ಹಿಂದೆ ಗೆಳೆಯರ ಜೊಜೆ ಪ್ರವಾಸ ಹೊರಟಿದ್ದ ಮುಹಮ್ಮದ್ ಅಲಿ ಅವರು ದೆಹಲಿಯಲ್ಲಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

Share Information