Connect with us

LATEST NEWS

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಿಂದೆ ಬಿದ್ದ ಮಂಗಳೂರು ಪೊಲೀಸ್ ಕಮಿಷನರ್

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಿಂದೆ ಬಿದ್ದ ಮಂಗಳೂರು ಪೊಲೀಸ್ ಕಮಿಷನರ್

ಮಂಗಳೂರು ಮಾರ್ಚ್ 30: ದೇಶದಾದ್ಯಂತ ಐಪಿಎಲ್ ಹವಾ ಜೋರಾಗಿ ಶುರವಾಗಿದೆ. ನಡುವೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಆನ್ ಲೈನ್ ಹಾಗೂ ಆಪ್ ಲೈನ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಬೆಟ್ಟಿಂಗ್ ದಂಧೆಕೋರರ ಹಿಂದೆ ಬಿದ್ದಿದ್ದಾರೆ.

ಈ ನಡುವೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಕೋರರ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಹಲವು ದಂಧೆಕೋರರನ್ನು ಬಂಧಿಸಿದ್ದು, ಮತ್ತೆ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 3.96 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಪ್ರಾರಂಭವಾದ ನಂತರ ಇದು ಮೂರನೇ ದಾಳಿ ಯಾಗಿದೆ.

ಇನ್ನು ಸೋಶಿಯಲ್ ಮಿಡಿಯಾ ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್​ ಪಾಟೀಲ್​ ಐಪಿಎಲ್ ಮ್ಯಾಚ್ ಬಗ್ಗೆ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಕಿದ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರಿಟ್ವೀಟ್ ಮಾಡಿ ಬೆಟ್ಟಿಂಗ್‌ದಾರರಿಗೆ ಎಚ್ಚರಿಸಿದ್ದಾರೆ.

ಐಪಿಎಲ್ ಟೂರ್ನಿ ಆರಂಭಕ್ಕೆ ಮುನ್ನ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದ ಅವರು, ಆನ್​​​ಲೈನ್​ ಬೆಟ್ಟಿಂಗ್​​ನಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿದ್ದರು.

ಆರ್‌ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್​​ ಪಂದ್ಯದ ಬಗ್ಗೆ ಆರ್‌ಸಿಬಿ ತಂಡ ಟ್ವೀಟ್ ಮಾಡಿತ್ತು. ಈ ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಮಂಗಳೂರು ಪೊಲೀಸ್​ ಕಮಿಷನರ್ ಸಂದೀಪ್ ಪಾಟೀಲ್, ಪಂದ್ಯಕ್ಕೆ ಎಲ್ಲರೂ ಸಿದ್ಧರಾಗಿರಿ. ಅದರಂತೆ ಮಂಗಳೂರು ಪೊಲೀಸರು ಕೂಡ ಕ್ರಿಕೆಟ್​​ ಬೆಟ್ಟಿಂಗ್​ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಎಚ್ಚರಿಸಿದ್ದರು.