Connect with us

  DAKSHINA KANNADA

  ಮಂಗಳೂರು: ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ನಳಿನ್ ಕುಮಾರ್ ಕಟೀಲ್ ಚಾಲನೆ

  ಭಾರತೀಯ ಜನತಾ ಪಾರ್ಟಿ ಆಯೋಜಿಸಿರುವ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಮಂಗಳೂರು ನಗರದ ಕದ್ರಿ ದೇವಸ್ಥಾನ ಆವರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

  ಮಂಗಳೂರು : ಇಂದಿನಿಂದ ದೇಶದಾದ್ಯಾಂತ ನನ್ನ ಮಣ್ಣು ನನ್ನ ದೇಶ ಅಭಿಯಾನ ಆರಂಭವಾಗಿದ್ದು , ಬಿಜೆಪಿಯ ಭದ್ರ ಕೋಟೆ ಕರಾವಳಿಯ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ,

  ಭಾರತೀಯ ಜನತಾ ಪಾರ್ಟಿ ಆಯೋಜಿಸಿರುವ ಈ ಅಭಿಯಾನಕ್ಕೆ ಮಂಗಳೂರು ನಗರದ ಕದ್ರಿ ದೇವಸ್ಥಾನ ಆವರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

  ಶಾಸಕರುಗಳಾದ ವೇದವ್ಐಅಸ್ ಕಾಮತ್, ಡಾ, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಮತ್ತಿತರ ಪ್ರಮುಖರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

  ಫ್ರಧಾನಿ ಮೋದಿ ಅಭಿಯಾನಕ್ಕೆ ಕರೆ ಕೊಟ್ಟಿದ್ದು ಈಗಾಗಲೇ ದೇಶವು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ, ಈವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ  ಕಾರ್ಯಕ್ರಮಗಳನ್ನು ನಡೆಸಲಾಗಿದೆ.

  ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಹುತಾತ್ಮರ ಸ್ಮರಣಾರ್ಥವಾಗಿ ಮೇರಿ ಮಾಟಿ ಮೇರಾ ದೇಶ್ ಎಂಬ ಅಭಿಯಾನದಡಿ.  ದೇಶದ ಮೂಲೆ ಮೂಲೆಗಳಿಂದಲೂ ಮೃತ್ತಿಕೆ ಸಂಗ್ರಹಿಸಿ, ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲೇ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು  “ಅಮೃತ್ ಉದ್ಯಾನ’ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

  ಈ ಉದ್ಯಾನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿ ಹೊರಹೊಮ್ಮಲಿದೆ..

  Share Information
  Advertisement
  Click to comment

  You must be logged in to post a comment Login

  Leave a Reply