Connect with us

DAKSHINA KANNADA

ಮಂಗಳೂರು : ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ, ಕಲ್ಲು ತೂರಾಟ, ವ್ಯಕ್ತಿಯನ್ನು ಕಟ್ಟಿ ಹಾಕಿ ಥಳಿತ..!

ಮಂಗಳೂರು : ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕಲ್ಲು ತೂರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಥಳಿಸಿದ ಘಟನೆ ಮಂಗಳೂರು ನಗರದ ಬೊಂದೇಲ್ ಚರ್ಚ್ ಬಳಿ ಬುಧವಾರ ಸಂಜೆ ನಡೆದಿದೆ.

ಅನಾಮಧೇಯ ಈ ವ್ಯಕ್ತಿ 55 ವರ್ಷ ಪ್ರಾಯದ ಸುಭಾಷ್ ಎಂದು ಹೇಳಲಾಗಿದ್ದು ಆತ ಬಿಜಾಪುರ ಮೂಲದವ ಎಂದು ತಿಳಿದು ಬಂದಿದೆ.

ಪರಿಸರದಲ್ಲಿ ಈತನ ಅಸಭ್ಯ ವರ್ತನೆ. ಮತ್ತು ಕಲ್ಲು ತೂರಾಟದಿಂದ ಆಕ್ರೋಶಗೊಂಡ ಸಾರ್ವಜನಿಕರನ್ನು ಕಟ್ಟಿ ಹಾಕಿ ಥಳಿಸಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,

ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ 108 ವಾಹನ ಮೂಲಕ ವೆನ್ಲಾಕ್‌ ಆಸ್ಪತ್ರೆಗೆ ರವಾನಿಸಿದ್ದಾರೆ, ಪೊಲೀಸ್ ಮಾಹಿತಿ ಪ್ರಕಾರ ಈತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Share Information
Advertisement
Click to comment

You must be logged in to post a comment Login

Leave a Reply