ತೊಕ್ಕೊಟ್ಟು ಪ್ಲೈಓವರ್ ಜೂನ್ 10 ರಂದು ಪಂಪ್ ವೆಲ್ ಪ್ಲೈ ಓವರ್ ಅಗಸ್ಟ್ ನಲ್ಲಿ ಸಂಚಾರಕ್ಕೆ ಮುಕ್ತ – ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು ಮೇ 30: ಭಾರಿ ಟ್ರೋಲ್ ಗೆ ಒಳಗಾಗಿದ್ದ ಮಂಗಳೂರಿನ ಎರಡು ಪ್ಲೈಓವರ್ ಗಳ ಕಾಮಗಾರಿ ಕೊನೆಯ ಹಂತ ತಲುಪಿದೆ. ಇದರಲ್ಲಿ ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿ ಬಹುತೇಕ ಸಂಪೂರ್ಣಗೊಂಡಿದ್ದು ಜೂನ್ 10 ರಂದು ಸಂಚಾರಕ್ಕೆ ಮುಕ್ತವಾಗಲಿದೆ.
ಅಲ್ಲದೆ ಆಗಸ್ಟ್‌ ಮೊದಲ ವಾರದಲ್ಲಿ ಪಂಪ್ ವೆಲ್ ಪ್ಲೈಓವರ್ ಕೂಡ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ತೊಕ್ಕೊಟ್ಟು ಹಾಗೂ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿಯನ್ನುಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದ ಅವರು ಕಳೆದ 6 ತಿಂಗಳಿನಿಂದ ಈ ಎರಡು ಫ್ಲೈಓವರ್‌ ಕಾಮಗಾರಿ ವೇಗ ಪಡೆದುಕೊಂಡಿದೆ. ಸಂಸ್ಥೆಯು ತಾಂತ್ರಿಕ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಸೂಚನೆಯ ಮೇರೆಗೆ 55 ಕೋ.ರೂ. ಸಾಲ ಕೂಡ ಸಂಸ್ಥೆಗೆ ನೀಡಲಾಯಿತು.

ಚುನಾವಣೆ ಕಾರಣ ಕಾಮಗಾರಿ ಮತ್ತೆ ವಿಳಂಬ ಹಾಗೂ ನೀತಿಸಂಹಿತೆ ಹಿನ್ನೆಲೆಯಲ್ಲಿ ನಮಗೆ ಮಧ್ಯಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಈಗ ಯೋಜನೆಗೆ ವೇಗ ದೊರಕಿದೆ. 1 ತಿಂಗಳೊಳಗೆ ಉಜೊಡಿ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

Facebook Comments

comments