DAKSHINA KANNADA
ಮಂಗಳೂರು : ಪಾಲಿಕೆ ಆಯುಕ್ತರ ಮನೆ, ಕಚೇರಿ ಸೇರಿ ರಾಜ್ಯದ 54 ಕಡೆ ಲೋಕಾಯುಕ್ತ ದಾಳಿ..!
ಬೆಂಗಳೂರು/ ಮಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 54 ಸ್ಥಳಗಳಲ್ಲಿ ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧಕಾರ್ಯ ಆರಂಭಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಸಂಬಂಧ ಬಂಧ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಅದರಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ, ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಅವರ ಮನೆಗೆ ಬೆಂಗಳೂರಿನ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತದ 100 ಕ್ಕೂ ಅಧಿಕ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಯಾದಗಿರಿ ಮತ್ತು ತುಮಕೂರಿನಲ್ಲಿ ದಾಖಲಾಗಿದ್ದ ದೂರಿನ ಅನ್ವಯ ಈ ಕಾರ್ಯಾಚರಣೆ ನಡೆಸಲಾಗಿದೆ. ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಯಾರ ಮನೆ ಕಚೇರಿಗಳಿಗೆ ದಾಳಿ..?
ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
ಬೆಂಗಳೂರು ಸಿಟಿ – ಬಿವಿ ರಾಜ ಎಫ್ ಡಿ ಎ ಕೆಐ ಎ ಡಿಬಿ
ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕಇಲಾಖೆ ಅಧಿಕಾರಿ ಮಂಡ್ಯ ವಿಭಾಗ
ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು ನಾರ್ತ್ ಸಬ್ ಡಿವಿಷನ್ ಆಫೀಸರ್