DAKSHINA KANNADA
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಈದ್ ಉಲ್ ಫಿತರ್ ಸಂಭ್ರಮ..!
ಮಂಗಳೂರು : ದೇಶದೆಲ್ಲೆಡೆ ನಾಳೆ ಗುರುವಾರ ಈದ್ ಉಲ್ ಫಿತರ್ ಆಚರಣೆ ನಡೆಯಲಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ರಂಜಾನ್ ಆಚರಿಸಲಾಗುತ್ತಿದೆ.
ಮಂಗಳವಾರ ಚಂದ್ರ ದರ್ಶನವಾದ ಮಾಹಿತಿ ಆಧರಿಸಿ ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಬಂದರು ದಕ್ಷಿಣಕನ್ನಡ ಜಿಲ್ಲಾ ಖಾಝಿಯವರಾದ ತ್ವಾಕ ಅಹಮದ್ ಮುಸ್ಲಿಯಾರ್ ಅವರು ಬುಧವಾರ (ಇಂದು) ಈದ್ ಉಲ್ ಫಿತರ್ ಆಚರಿಸುವುದು ಎಂದು ಘೋಷಿಸಿದ್ದರು.
ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ರಂಜಾನ್ ಆಚರಣೆ ನಡೆಯುತ್ತಿದೆ. ಒಂದು ತಿಂಗಳ ಉಪವಾಸ ತೊರೆದ ಮುಸ್ಲಿಮರು ಇಂದು ಬೆಳಗ್ಗೆ ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿದರು.
ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ನಡೆದ ನಮಾಜ್ನಲ್ಲಿ ಪಾಲ್ಗೊಂಡರು.