ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಸ್ಥಳಕ್ಕೆ ಬಾರದೇ ಎಸಿ ರೂಮ್ ನಲ್ಲಿ ಕುಳಿತ ಅಧಿಕಾರಿಗಳು

ಮಂಗಳೂರು ಮೇ 13: ಮಂಗಳೂರು ಹೊರವಲಯದ ವಾಮಂಜೂರು ಡಂಪಿಂಗ್ ಯಾರ್ಡ್ ಗೆ ಬೆಂಕಿ ಬಿದ್ದಿದ್ದು , ಸ್ಥಳೀಯ ನಿವಾಸಿಗಳು ಬೆಂಕಿಯಿಂದ ಉಂಟಾದ ಹೊಗೆಯಿಂದ ಉಸಿರಾಡಲು ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ಹೊರ ವಲಯದ ವಾಮಂಜೂರು ಡಂಪಿಂಗ್ ಯಾರ್ಡಿಗೆ ಬೆಂಕಿ ಬಿದ್ದು ದಟ್ಟ ಹೊಗೆ ಆವರಿಸಿದೆ. ಸ್ಥಳಿಯರ ಮಾಹಿತಿ ಪ್ರಕಾರ ಯಾರೋ ಕಿಡಿಗೇಡಿಗಳು ತಡರಾತ್ರಿ ಬೆಂಕಿ ಹಚ್ಚಿದ್ದಾರೆಂದು ಹೇಳಲಾಗಿದ್ದು, ಈ ಬೆಂಕಿಯಿಂದ ಉದ್ಭವಿಸಿದ ಉಂಟಾದ ದಟ್ಟ ಹೊಗೆ ಇಡೀ ವಾಮಂಜೂರು ಪ್ರದೇಶಕ್ಕೆ ಪಸರಿಸಿದ್ದು ಸ್ಥಳಿಯರ ಬದುಕೇ ದುಸ್ಥರವಾಗಿದೆ.

ಹೊಗೆಯಿಂದ ಸ್ಥಳಿಯರಿಗೆ ಉಸಿರಾಡಲೂ ತೊಂದರೆಯಾಗಿದೆ. ಮಂಗಳೂರು ಮಹಾ ನಗರ ಪಾಲಿಕೆ ಈ ಡಂಪಿಂಗ್ ಯಾರ್ಡ್ ನಿರ್ವಹಣೆ ಮಾಡುತ್ತಿದೆ. ಸದ್ಯ ಬೆಂಕಿ ನಂದಿಸಲು ಒಂದು ಅಗ್ನಿ ಶಾಮಕ ದಳದ ಟ್ಯಾಂಕರಿನಿಂದ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಮುಂದಾಳತ್ವ ವಹಿಸಬೇಕಾಗಿದ್ದ ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಹೋಗದೇ ಕಚೇರಿಲ್ಲಿ ಕೂತು ಎಸಿ ಗಾಳಿಯನ್ನು ಸೇವಿಸುತ್ತಿದ್ದಾರೆ.

ಸ್ಥಳೀಯ ಜನರು ಉಸಿರಾಡಲು ಕಷಟ ಪಾಲಿಕೆಯ ಅಧಿಕಾರಿಗಳನ್ನು ಸ್ಥಳಿಯರು ತರಾಟೆಗೆ ತೆಗೆದುಕೊಂಡಿದ್ದಾರೆ.

12 Shares

Facebook Comments

comments