ಮಂಗಳೂರು ನವೆಂಬರ್ 17: ಇಬ್ಬರು ಸೈಬರ್ ವಂಚಕರನ್ನು ಈ ಬಾರಿ ತಮ್ಮ ಬಲೆಗೆ ಬೀಳಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಸಂಖ್ಯೆ ಹಾಗೂ ಮೊಬೈಲ್ ಗಳ ಸಿಮ್ ಗಳ ಸಂಖ್ಯೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.


ಬಂಧಿತರನ್ನು ತ್ರಿಪುರ ರಾಜ್ಯದ ಧಾಲಾಯ್‌ ದಮೆಂಜಯ್‌ ರಿಯಾಂಗ್‌ (27) ಹಾಗೂ ಮಣಿಪುರ ರಾಜ್ಯದ ಕಂಗ್‌ಪೋಕ್ಪಿ ಜಿಲ್ಲೆಯ ಹಮ್‌ಗ್ಟೆ ರಿಯೆಯ್ಲ್‌ ಕೋಮ್‌ ಅಲಿಯಾದ್‌ ಮಂಗ್ಟೆ ಅಮೋಶ್‌ (33) ಎಂದು ಗುರುತಿಸಲಾಗಿದ್ದು, ಮಂಗಳೂರು ಸೆನ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Read This ಸೌದಿ ಅರೇಬಿಯಾದ ಮದೀನಾ ಬಳಿ ಬಸ್ ಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ: 42 ಭಾರತೀಯರು ಸಜೀವ ದಹನ

ಬಂಧಿತರಲ್ಲಿ ಒಬ್ಬ ಆರೋಪಿ ಹಮ್‌ಗ್ಟೆ ರಿಯೆಯ್ಲ್‌ ಕೋಮ್‌ 300ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹಾಗೂ 250ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚನೆ ಕೃತ್ಯಕ್ಕೆ ಬಳಸಿದ್ದು ಕಂಡುಬಂದಿದೆ. ಆತನಿಂದ 8 ಮೊಬೈಲ್, 20 ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು, 18 ಬ್ಯಾಂಕ್‌ಗಳ ಪಾಸ್‌ಬುಕ್‌ಗಳು, 11 ಬ್ಯಾಂಕ್‌ಗಳ ಚೆಕ್ ಬುಕ್‌ಗಳು ಹಾಗೂ 7 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿನಷರ್‌ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Read This ಮೂಡಬಿದ್ರೆ – ವಾಹನದಲ್ಲಿ ಅಕ್ರಮ ಗೋ ಸಾಗಾಟ ಮೂವರು ಆರೋಪಿಗಳು ಅರೆಸ್ಟ್

ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಸೇರಿದ ವಿವಿಧ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ₹ 7.27 ಲಕ್ಷ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ನಗರದ ಸೆನ್ ಅಪರಾಧ ಠಾಣೆಗೆ 2024ರಲ್ಲಿ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 (ಸಿ) ಮತ್ತು (ಡಿ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 420ರ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

Read This ಕರ್ನಾಟಕದ ಅತೀ ದೊಡ್ಡ ಡಿಜಿಟಲ್ ಅರೆಸ್ಟ್ ಹಗರಣ – ಸೈಬರ್ ವಂಚಕರ ಬಲೆಗೆ ಬಿದ್ದು 32 ಕೋಟಿ ಕಳೆದುಕೊಂಡ ಟೆಕ್ಕಿ ಮಹಿಳೆ

ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು ಪರಿಶೀಲಿಸಿದಾಗ ಆರೋಪಿಗಳಿಬ್ಬರು ಕೃತ್ಯದಲ್ಲಿ ಕೈಜೋಡಿಸಿದ್ದು ಗೊತ್ತಾಗಿದೆ. ಆರೋಪಿ ದಮೆಂಜಯ್‌ ರಿಯಾಂಗ್‌ ಎಂಬಾತನನ್ನು ನ.13ರಂದು ಹಾಗೂ ಆರೋಪಿ ಹಮ್‌ಗ್ಟೆ ರಿಯೆಯ್ಲ್‌ ಕೋಮ್‌ನನ್ನು ನ15ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share Information