Connect with us

    DAKSHINA KANNADA

    ಮಂಗಳೂರು: ಪಬ್ ಮೇಲೆ ಭಜರಂಗದಳ ದಾಳಿ ಪ್ರಕರಣ, ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿ ಪೊಲೀಸ್ ವಶಕ್ಕೆ

    ಮಂಗಳೂರು, ಜುಲೈ 26: ನಗರ್ ಪಬ್ ಮೇಲೆ ಭಜರಂಗದಳ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಗರದ ಬಲ್ಮಠ ಬಳಿಯ ಪಬ್ ನ ಒಳಗೆ ಅಪ್ರಾಪ್ತರಿಗೂ ಪ್ರವೇಶ ನೀಡಲಾಗಿತ್ತು, ಇದಲ್ಲದೆ ಮದ್ಯ ನೀಡಿದ ವಿಚಾರವಾಗಿ ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಮಂಗಳೂರು ಬಂದರು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮೋಜು-ಮಸ್ತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ !

    ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಬ್ನಲ್ಲಿ ಪಾರ್ಟಿ ನಡೆಯುತಿದ್ದು, ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿಯಲ್ಲಿ ತೊಡಗಿದ್ದ ವಿಚಾರವಾಗಿ ಭಜರಂಗದಳ ಕಾರ್ಯಕರ್ತರು ಪಬ್ ಪ್ರವೇಶ ಖಂಡಿಸಿ ನಿನ್ನೆ ಪಬ್ ಮುಂದೆ ಜಮಾವಣೆಗೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply