ಮಂಗಳೂರಿನ ಎಡಪದವು ಹನುಮಾನ್ ಮಂದಿರದ ಬಳಿ ನಾಲ್ಕು ಜನ ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತನಾದ ಅಖಿಲೇಶ್ ಎಂಬವರ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆ ಯತ್ನ ನಡೆಸಿರುವುದನ್ನು ಬಜರಂಗದಳ ಖಂಡಿಸಿದೆ.
ಮಂಗಳೂರು : ಮಂಗಳೂರಿನ ಎಡಪದವು ಹನುಮಾನ್ ಮಂದಿರದ ಬಳಿ ನಾಲ್ಕು ಜನ ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತನಾದ ಅಖಿಲೇಶ್ ಎಂಬವರ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆ ಯತ್ನ ನಡೆಸಿರುವುದನ್ನು ಬಜರಂಗದಳ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕರಾದ ನವೀನ್ ಮೂಡುಶೆಡ್ಡೆ ಅವರು ಒಂದು ಬೈಕ್ ನಲ್ಲಿ ನಾಲ್ಕು ದುಷ್ಕರ್ಮಿಗಳು ಬಂದು ತಲವಾರಿಂದ ಹಲ್ಲೆ ನಡೆಸಿರುವುದು ಬಹಳ ಗಂಭೀರವಾದಂತಹ ಘಟನೆಯಾಗಿದೆ. ಅಮಾಯಕ ಯುವಕರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ಅಗ್ರಹ ಮಾಡುತ್ತೇವೆ ಎಂದು ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕರಾದ ನವೀನ್ ಮೂಡುಶೆಡ್ಡೆ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.



