Connect with us

    DAKSHINA KANNADA

    ಮಂಗಳೂರು: ಸುರತ್ಕಲ್ ಹೊಸಬೆಟ್ಟು ಜಂಕ್ಷನ್‌ನಲ್ಲಿ ಬೈಕಿಗೆ ಗುದ್ದಿದ್ದ ಬಸ್ ನ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ..!

    ರಸ್ತೆ ದಾಟಲೆಂದು ನಿಂತಿದ್ದ ಬೈಕ್​ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್​ವೊಂದು ರಭಸವಾಗಿ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್​ ನ ಹೊಸಬೆಟ್ಟು ಸಮೀಪ ನಡೆದಿದೆ.

    ಸುರತ್ಕಲ್ : ರಸ್ತೆ ದಾಟಲೆಂದು ನಿಂತಿದ್ದ ಬೈಕ್​ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್​ವೊಂದು ರಭಸವಾಗಿ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ​ನ ಹೊಸಬೆಟ್ಟು ಸಮೀಪ ನಡೆದಿದೆ.

    ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ.

    ಭಾನುವಾರ ಬೆಳ್ಳಂಬೆಳಗ್ಗೆ 7.55ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್​ ಬಸ್​ ಶರವೇಗದಿಂದ ಬಂದು ಬೈಕ್​ಗೆ ಗುದ್ದಿದೆ.

    ಈ ಘಟನೆಯಲ್ಲಿ ಬೈಕ್ ಸವಾರರಾದ ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಅರ್ಫಾನ್ ಮತ್ತು ಹಳೆಯಂಗಡಿ ಇಂದಿರಾ ನಗರದ ನಿವಾಸಿ‌ ಅಮೀರ್ ಸಾಹಿಲ್ ಎಂಬುವವರು ಗಾಯಗೊಂಡಿದ್ದಾರೆ.

    ಇದರಲ್ಲಿ ಅರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸಬೆಟ್ಟು ಬಳಿ ರಸ್ತೆ ದಾಟಲು ಬೈಕ್​ ಡಿವೈಡರ್ ಬಳಿ ನಿಂತಿತ್ತು.

    ಈ ವೇಳೆ ವೇಗದಲ್ಲಿ ಬಂದ ಮಂಗಳೂರು – ಉಡುಪಿ ಖಾಸಗಿ ಬಸ್ ಅಡ್ಡಲಾಗಿ ಬಂದು ಗುದ್ದಿಕೊಂಡು ಹೋಗಿದೆ. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

    ತಕ್ಷಣ ಗಾಯಾಳುಗಳನ್ನು ನಗರದ ಎ.ಜೆ. ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್​ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply