Connect with us

LATEST NEWS

ಚಲನಚಿತ್ರಗಳಲ್ಲಿ ವಕೀಲರ ಸಮುದಾಯ ಅವಹೇಳನ ವಿರುದ್ದ ತೀವ್ರ ಹೋರಾಟ – ಎಚ್.ವಿ. ರಾಘವೇಂದ್ರ

ಚಲನಚಿತ್ರಗಳಲ್ಲಿ ವಕೀಲರ ಸಮುದಾಯ ಅವಹೇಳನ ವಿರುದ್ದ ತೀವ್ರ ಹೋರಾಟ – ಎಚ್.ವಿ. ರಾಘವೇಂದ್ರ

ಮಂಗಳೂರು ಸೆಪ್ಟೆಂಬರ್ 12: ತುಳು ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಗಿರುವ ಚಿತ್ರ ಗಿರಿಗಿಟ್ ಗೆ ಕಂಟಕ ಎದುರಾಗಿದ್ದು ವಕೀಲರ ಅವಹೇಳನ ವಿರುದ್ದ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದು ಗಿರಿಗಿಟ್ ತುಳು ಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಈ ಕುರಿತಂತೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಈ ಚಿತ್ರದಲ್ಲಿ ವಕೀಲರ ಸಮುದಾಯವನ್ನು ಅವಹೇಳನ ಮಾಡಲಾಗಿದೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಬಗ್ಗೆ ಕೀಳು ಅಭಿರುಚಿಯಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿದರು.

 ಈ ಸಂಬಂಧ ಮಂಗಳೂರು ವಕೀಲರ ಸಂಘ ನ್ಯಾಯಾಂಗದ ಮೊರೆ ಹೋಗಿದೆ. ಉದ್ದೇಶಪೂರ್ವಕವಾಗಿ ಚಿತ್ರದಲ್ಲಿ ವಕೀಲರ ಬಗ್ಗೆ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅವಹೇಳನ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ವಕೀಲರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ವಕೀಲರ ಸಂಘದ ದೂರನ್ನು ಪರಿಗಣಿಸಿದ ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಚಿತ್ರಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಸೆಪ್ಟಂಬರ್ 17 ರಂದು ಈ ವಿಚಾರವಾಗಿ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ಅಲ್ಲದೆ ಮುಂದೆ ಕೂಡ ವಕೀಲರ ಬಗ್ಗೆ ಇಂತಹ ಮಾನ ಹಾನಿಕರ ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ಮಂಗಳೂರು ವಕೀಲರ ಸಂಘವು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Facebook Comments

comments