ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ ಸ್ಕೇಟರ್ ಗೆ ಬೆಳ್ಳಿ ಪದಕ

ಮಂಗಳೂರು,ಎಪ್ರಿಲ್ 26: ಉತ್ತರಪ್ರದೇಶದ ಗ್ರೇಟರ್ ನೊಯ್ಡಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ -2019 ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಒಂದು ಬೆಳ್ಳಿ ಪದಕ ಪಡೆದಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರೋಲರ್ ಸ್ಕೇಟಿಂಗ್ ಫೇಡರೇಷನ್ ಆಫ್ ಇಂಡಿಯಾ ಹಾಗೂ ಉತ್ತರ ಪ್ರದೇಶ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ ಆಲ್ ಇಂಡಿಯಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 14 ವರ್ಷದೊಳಗಿನ ವಿಭಾಗ, 500 ಮೀಟರ್‌ ರಿಂಕ್ ರೇಸ್ ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ನಗರದ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಕೊನ್ಸೆಸ್ಸೊ ಹಾಗೂ
ಡೋರಿಸ್ ಕೊನ್ಸೆಸ್ಸೊ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.

ಇವರು ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದು, ತರಬೇತುದಾರ ಮೋಹನ್.ಕೆ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

5 Shares

Facebook Comments

comments