LATEST NEWS
ಎಪ್ರಿಲ್ 3 ರವರೆಗೆ ಮಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ತರಗತಿ ಬಂದ್
ಮಂಗಳೂರು ಮಾರ್ಚ್ 29 : ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಕೊರೋನಾ ಪ್ರಕರಣ ಬೆಳಕಿಗೆ ಬಂದ ಹಿನ್ನಲೆ ಈಗಾಗಲೇ ವಿವಿಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ತರಗತಿಯನ್ನು ಮತ್ತೆ 5 ದಿನಗಳ ಕಾಲ ರದ್ದು ಮಾಡಿ ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.
ಮಂಗಳೂರು ವಿವಿ ಕ್ಯಾಂಪಸ್ನ ವಿವಿಧ ವಿಭಾಗಗಳಲ್ಲಿರುವ ವಿಧ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಮಾರ್ಚ್ 25 ರಿಂದ 29ರ ವರೆಗೆ ರದ್ದುಪಡಿಸಲಾಗಿತ್ತು. ಇದೀಗ ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಬಾರದ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 30 ರಿಂದ ಎಪ್ರಿಲ್ 3 ರವರೆಗೆ ವಿವಿ ತರಗತಿ ರದ್ದತಿಗೆ ಕ್ರಮ ಕೈಗೊಂಡಿದೆ.
ಅಲ್ಲದೆ ವಸತಿ ನಿಲಯಗಳಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳು ವಸತಿ ನಿಲಯ ಬಿಟ್ಟು ತೆರಳದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.
You must be logged in to post a comment Login