Connect with us

    DAKSHINA KANNADA

    2050ರ ವೇಳೆಗೆ ಸಮುದ್ರಪಾಲಾಗಲಿದೆ ಮಂಗಳೂರು …!

    ನವದೆಹಲಿ, ಎಪ್ರಿಲ್ 08: 2050ರ ವೇಳೆಗೆ ಮಂಗಳೂರು, ಮುಂಬೈ, ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ ಸೇರಿದಂತೆ ದೇಶದ ಕರಾವಳಿ ಭಾಗಗಳು ಸಮುದ್ರ ಪಾಲಾಗಲಿದೆ ಎಂದು ವರದಿಯೊಂದು ತಿಳಿಸಿದೆ.

    ಆರ್‌ಎಂಎಸ್‌ಐ ಗ್ಲೋಬಲ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಕಂಪನಿಯು ಈ ವಿಶ್ಲೇಷಣೆ ನಡೆಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರ ಸಮಿತಿಯ (ಐಪಿಸಿಸಿ) 2021 ವರದಿಯನ್ನು ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗಿದೆ.

    ಚೆನ್ನೈ, ಮುಂಬೈ, ಕೊಚ್ಚಿ, ಮಂಗಳೂರು, ವೈಝಾಗ್‌ ಹಾಗೂ ತಿರುವನಂತಪುರ ಕರಾವಳಿ ನಗರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಹೈ–ರೆಸಲ್ಯೂಷನ್‌ ಡಿಜಿಟಲ್‌ ರೂಪದಲ್ಲಿ ಭೂಪ್ರದೇಶದ ಮಾದರಿಯನ್ನು ಸೃಷ್ಟಿಸಿ, ಸಮುದ್ರ ಮಟ್ಟ ಏರಿಕೆ ಮುನ್ನೆಚ್ಚರಿಕೆಗಳನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ. ಐಪಿಸಿಸಿ ವರದಿಯ ಪ್ರಕಾರ, 2050ಕ್ಕೆ ಭಾರತದಲ್ಲಿ ಸಮುದ್ರ ಮಟ್ಟ ಭಾರೀ ಏರಿಕೆಯಾಗಲಿದೆ.

    ಹಿಂದೂ ಮಹಾಸಾಗರದ ಉತ್ತರದಲ್ಲಿ 1874ರಿಂದ 2004ರ ವರೆಗೂ ಪ್ರತಿ ವರ್ಷ ಸಮುದ್ರ ಮಟ್ಟ 1.06ರಿಂದ 1.75 ಮಿ.ಮೀ. ಏರಿಕೆಯಾಗಿದೆ. 1993-2017ರ ವರೆಗೂ ಪ್ರತಿ ವರ್ಷ 3.3 ಮಿ.ಮೀ ಏರಿಕೆಯಾಗಿದೆ. ಈ ಪ್ರಮಾಣ ಮುಂದೆ ಇನ್ನೂ ಹೆಚ್ಚಳವಾಗಲಿದ್ದು, ಮುಂಬೈನಲ್ಲಿ ಸುಮಾರು 998 ಕಟ್ಟಡಗಳು ಹಾಗೂ 24 ಕಿ.ಮೀ. ಉದ್ದದ ರಸ್ತೆ ಮಾರ್ಗಕ್ಕೆ 2050ರ ವೇಳೆಗೆ ಅಪಾಯ ಎದುರಾಗಲಿದೆ.

    ಸಮುದ್ರ ಮಟ್ಟದಲ್ಲಿ ಹೆಚ್ಚಳವಾಗುವುದರಿಂದ ಚೆನ್ನೈನಲ್ಲಿ 55 ಕಟ್ಟಗಳು, 5 ಕಿ.ಮೀ. ರಸ್ತೆ ಮಾರ್ಗ ಅಪಾಯಕ್ಕೆ ಸಿಲುಕಲಿವೆ. ಕೊಚ್ಚಿಯಲ್ಲಿ 464 ಕಟ್ಟಡಗಳು, ತಿರುವನಂತರಪುರದಲ್ಲಿ 349 ಕಟ್ಟಡಗಳು ಹಾಗೂ ವಿಶಾಖಪಟ್ಟಣದಲ್ಲಿ 206 ಕಟ್ಟಡಗಳು ಮತ್ತು 9 ಕಿ.ಮೀ. ದೂರದ ರಸ್ತೆ ಸಂಪರ್ಕ ವ್ಯವಸ್ಥೆ ಮುಳುಗಿ ಹೋಗುವ ಸಾಧ್ಯತೆ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply