Connect with us

    LATEST NEWS

    ಮಂಗಳೂರು- ಖಾಸಗಿ ಕಾಲೇಜಿನ ಹಾಸ್ಟೇಲ್ ನಿಂದ ಪರಾರಿಯಾದ ಮೂವರು ವಿಧ್ಯಾರ್ಥಿನಿಯರು

    ಮಂಗಳೂರು ಸೆಪ್ಟೆಂಬರ್ 21: ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೇಲ್ ನಿಂದ ಮೂವರು ವಿಧ್ಯಾರ್ಥಿನಿಯರು ರಾತ್ರೋರಾತ್ರಿ ಪರಾರಿಯಾದ ಘಟನೆ ನಡೆದಿದೆ.


    ಮಂಗಳೂರಿನ ಮೇರಿ ಹಿಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರ ಹಾಸ್ಟೆಲ್​ನಲ್ಲಿದ್ದ ಮೂವರು ಹಾಸ್ಟೇಲ್ ನ ಕಿಟಕಿ ಮುರಿದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.


    ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ನಿವಾಸಿಗಳಾಗಿದ್ದು, ಮತ್ತೋರ್ವ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದವಳೆಂದು ಗೊತ್ತಾಗಿದೆ. ವಿದ್ಯಾರ್ಥಿನಿಯರು ಪಿಯುಸಿ ಓದುತ್ತಿದ್ದಾರೆ. “ನಾವು ಹೋಗುತ್ತಿದ್ದೇವೆ, ಕ್ಷಮಿಸಿ” ಎಂದು ಚೀಟಿ ಬರೆದಿಟ್ಟು ಮುಂಜಾನೆ 3 ಗಂಟೆಯ ವೇಳೆಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ.ಕಂಕನಾಡಿ ನಗರ ಠಾಣಾ ಪೊಲೀಸರು ಪರಿಶೀಲನೆ ‌ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply