Connect with us

    LATEST NEWS

    ಮಂಗಳೂರು – ಮಳೆಗೆ ಕುಸಿದು ಬಿದ್ದ ಮರದ ಮಿಲ್….!!

    ಮಂಗಳೂರು ಮೇ 19: ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಹೊಯ್ಗೆ ಬಜಾರ್ ನಲ್ಲಿರುವ ಮರದ ಮಿಲ್ ಒಂದು ಕುಸಿದು ಬಿದ್ದ ಘಟನೆ ನಡೆದಿದೆ.


    ಮಂಜೇಶ್ವರದ ಕೆ. ಅಬ್ದುಲ್ಲಾ ಎಂಬವರಿಗೆ ಸೇರಿದ ಬಾವಾ ವುಡ್ ಇಂಡಸ್ಟ್ರೀಸ್ ಎಂಬ ಹೆಸರಿನ ಮರದ ಮಿಲ್ ಇದಾಗಿದೆ. ಬುಧವಾರ ಸುರಿದ ಭಾರೀ ಮಳೆಯ ನೀರು ಗೋಡೆಗೆ ಬಡಿದು ಬಿರುಕು ಕಾಣಿಸಿಕೊಂಡಿತು ಎನ್ನಲಾಗಿದೆ. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಗೋಡೆ ಕುಸಿದ ಪರಿಣಾಮ ಮಿಲ್ ನ ಒಳಗೆ ಇದ್ದ ಮರಗಳು ಹಾಗೂ ಯಂತ್ರಗಳಿಗೆ ಹಾನಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply