ಮಂಗಳೂರು ಸೆಪ್ಟೆಂಬರ್ 14: ಮಂಗಳೂರಿನಲ್ಲಿ ರಸ್ತೆ ಅವ್ಯವಸ್ಥೆ ವಿರುದ್ದ ಇದೀಗ ಸಂಘಟನೆಗಳ ಬದಲು ಸಾಮಾನ್ಯ ನಾಗರೀಕರೂ ಪ್ರತಿಭಟನೆ ಮಾಡುವ ಹಂತಕ್ಕೆ ತಲುಪಿದೆ.

ಮಂಗಳೂರಿನ ರಸ್ತೆಗಳ ಅವ್ಯವಸ್ಥೆ ವಿರುದ್ದ ಮಂಗಳೂರಿನ ಮಿನಿವಿಧಾನ ಸೌಧದ ಮುಂಭಾಗ ಮಂಗಳೂರಿನ ನಾಗರೀಕರು ಮತ್ತು ವಿಧ್ಯಾರ್ಥಿಗಳು ಹಾಗೂ ಯುವಜನರು ಮೌನ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಮಂಗಳೂರಿನ ರಸ್ತೆಅವ್ಯವಸ್ಥೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದೆ. ಅಲ್ಲದೆ ನಾವು ಮನೆ ತೆರಿಗೆ, ರಸ್ತೆ ತೆರಿಗೆ ಹೀಗೆ ಹತ್ತು ಹಲವು ತೆರಿಗೆ ನೀಡ್ತೇವೆ ಆದ್ರೆ ಇಲ್ಲಿನ ರಸ್ತೆ ಬಾವಿಯಂತೆ ಇದೆ. ನಾವು ಕಟ್ಟುವ ತೆರಿಗೆ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನೆ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಬೇಕು ಆದರೆ ಇಲ್ಲಿ ಆಗುತ್ತಿಲ್ಲ ಎಂದರು.

ನಾವು ಸಮಸ್ಯೆಗಳ ಬಗ್ಗೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತೇವೆ, ಅದರುೂ ನಾವು ಬದಲು ಬನ್ನಿ ಜನಪ್ರತಿನಿಧಿಗಳನ್ನು ಪ್ರಶ್ನಿಸೋಣ ಎಂದರು. ಮಂಗಳೂರು ಸಿಟಿಯಲ್ಲಿ ಒಂದು ರಸ್ತೆ ಆಗುತ್ತಿದ್ದಂತೆ ಇನ್ನೊಂದು ಕಡೆ ಜೆಸಿಬಿ ರೆಡಿಯಾಗಿರುತ್ತದೆ ಹೊಂಡ ಮಾಡ್ಲಿಕ್ಕೆ, ಒಂದೊಳ್ಳೆ ರಸ್ತೆಕೊಟ್ಟರೆ ನಾವು ಟೋಲ್ ಕಟ್ಟುತ್ತೇವೆ ಎಂದರು.



