Connect with us

LATEST NEWS

ಮಂಗಳೂರಿನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ನಿಗೂಢ ನಾಪತ್ತೆ..!

ಮಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಕೆಲ ದಿನಗಳಿಂದ ಆತ್ಮಹತ್ಯೆಯಂತಹ ಸುದ್ದಿಗಳು ಬರುತ್ತಿವೆ. ಇದರ ಬೆನ್ನಲ್ಲೇ ಮಂಗಳೂರಿನಿಂದ ಪೊಲೀಸ್ ಸಿಬ್ಬಂದಿಯೋರ್ವ ನಾಪತ್ತೆಯಾಗಿದ್ದಾರೆ.


ಮಂಗಳೂರು ಹೊರವಲಯದ ಉಳ್ಳಾಲ ಕೊಣಾಜೆಯ ಕೆಎಸ್ ಆರ್ ಪಿ 7 ನೇ ಬೆಟಾಲಿಯನ್‌ ನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಕುಮಾರ್ (29) ನಾಪತ್ತೆಯಾದವರು. ಅಸೈಗೋಳಿಯ ಪೊಲೀಸ್ ವಸತಿ ಗೃಹದಿಂದ ಅನಿಲ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕೊಣಾಜೆ‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಮೂಲತ ಚಿಕ್ಕಮಗಳೂರು ಜಿಲ್ಲೆಯವರಾದ ಅನಿಲ್ ತಾಯಿ, ಪತ್ನಿಯೊಂದಿಗೆ ಅಸೈಗೋಳಿಯ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಗುರುವಾರ ಸಂಜೆಯಿಂದ ಅವರು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Facebook Comments

comments