Connect with us

    LATEST NEWS

    ಮಂಗಳೂರು – ಮಧ್ಯರಾತ್ರಿ ಹುಡುಗಿಯರೊಂದಿಗೆ ಪಾರ್ಟಿ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ನೂತನ ಪೊಲೀಸ್ ಕಮೀಷನರ್

    ಮಂಗಳೂರು ಜನವರಿ 8: ಮಂಗಳೂರು ನಗರಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅಧಿಕಾರ ಸ್ವೀಕರಿಸುತ್ತಿದ್ದಂತೆ , ನಗರದ ಕಾನೂನು ಸುವ್ಯವಸ್ಥೆಯನ್ನು ಸರಿದಾರಿ ತರಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಜಡ್ಡು ಕಟ್ಟಿದ್ದ ಮಂಗಳೂರು ಪೊಲೀಸ್ ಇಲಾಖೆಯ ಮತ್ತೆ ಸರಿದಾರಿ ಸ್ವತಃ ಕಮಿಷನರ್ ಪೀಲ್ಡ್ ಗೆ ಇಳಿದಿದ್ದು, ಕ್ರಿಮಿನಲ್ ಗಳಿಗೆ ನಡುಕ ಹುಟ್ಟಿಸಿದ್ದಾರೆ.


    ಮಂಗಳೂರು, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಬೀಚ್‌ಗಳಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿ ಮಾಡುವವವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಬೀಚ್ ಗಳಿಗೆ ಪೊಲೀಸ್ ಅಧಿಕಾರಿಗಳ ನೇತೃತ್ವದ 20 ತಂಡಗಳು ಹಠಾತ್ ದಾಳಿ ನಡೆಸಿ ಅಕ್ರಮ ಚಟುವಟಿಕೆಯ ಬಗ್ಗೆ ತಪಾಸಣೆ ನಡೆಸಿದ್ದಾರೆ.


    ನಗರದ ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್ ಬೀಚ್‌ಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ನೇತೃತ್ವದ ನಗರ ಪೊಲೀಸರ ತಂಡ ಏಕಕಾಲಕ್ಕೆ ಲಗ್ಗೆಯಿಟ್ಟು ತಪಾಸಣೆ ನಡೆಸಿದೆ. ಈ ಸಂದರ್ಭ ಬೀಚ್ ಗಳಲ್ಲಿ ಕಾರುಗಳಲ್ಲಿ ಬಂದು ಕುಡಿತ ಮೋಜು ಮಸ್ತಿ- ಅಕ್ರಮ – ಅಶ್ಲೀಲ ಚಟುವಟಿಕೆಗಳು ಕಂಡು ಬಂದಿವೆ. 70 ಮಂದಿ ಯುವಕ – ಯುವತಿಯರು ಈ ಸಂದರ್ಭ ಪಾನಮತ್ತರಾಗಿದ್ದು ಕಂಡು ಬಂದಿದೆ. ಓರ್ವ ಡ್ರಗ್ ಪೆಡ್ಲರನ್ನು ಬಂಧಿಸಿದ್ದು ಆತನ ಬಳಿ ಗಾಂಜಾ, ಮಾದಕ ಪದಾರ್ಥ ಸೇರಿಸಿದ ಚಾಕಲೇಟ್ ಗಳು, ಚೂರಿ ಪತ್ತೆಯಾಗಿದ್ದು ಆತನ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.


    ಅಲ್ಲದೆ ಅನಗತ್ಯವಾಗಿ ಬೀಚ್ ಬಳಿ ಕುಳಿತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಮಂಗಳೂರು ಟೌನ್ ಹಾಲ್ ಬಳಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರ ಮಾಹಿತಿ ಸಂಗ್ರಹಿಸಿ ಅವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದ ತಂಡ ದಾಳಿ ಮಾಡಿದೆ. ಮದ್ಯದ ಬಾಟಲಿಗಳು, ಸೈಡ್ಸ್, ಗಾಂಜಾ, ಒಂದು ಡ್ಯಾಗರ್, ಹಲವು ಕಾರು-ಬೈಕ್ ಗಳ ಸಮೇತ ವಶಕ್ಕೆ ಪಡೆಯಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply