Connect with us

    LATEST NEWS

    ಮಂಗಳೂರು-ಮುಂಬೈ ಮಧ್ಯೆ ಡಿಸೆಂಬರ್ 17ರಿಂದ ಮತ್ತೆ ಮತ್ಸ್ಯಗಂಧ ರೈಲು ಸಂಚಾರ ಆರಂಭ

    ಮಂಗಳೂರು ಡಿಸೆಂಬರ್ 11: ಮಂಗಳೂರು – ಮುಂಬೈ ಮಧ್ಯೆ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಕ್ಕೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದ್ದು, ಪ್ರಸ್ತುತ ತಲಾ 15 ದಿನಗಳ ಕಾಲ ಉತ್ಸವ ರೈಲು ರೂಪದಲ್ಲಿ ಓಡಿಸುವುದಕ್ಕೆ ದಕ್ಷಿಣ ರೈಲ್ವೆ ತೀರ್ಮಾನಿಸಿದೆ.


    ರೈಲ್ವೆ ಗಾಡಿ ಸಂಖ್ಯೆ 02620 ಮಂಗಳೂರು ಸೆಂಟ್ರಲ್ – ಎಲ್ ಟಿಟಿ ರೈಲು ಡಿ.17ರಿಂದ 31ರ ವರೆಗೆ ಹಾಗೂ ನಂ.0619 ಎಲ್‌ಟಿಟಿ-ಮಂಗಳೂರು ಸೆಂಟ್ರಲ್ ರೈಲು ಪ್ರತಿ ದಿನ ಸಂಚರಿಸಲಿವೆ. ಎರಡೂ ರೈಲು ತಲಾ 15 ಟ್ರಿಪ್ ಇರುವುದಾಗಿ ದಕ್ಷಿಣ ರೈಲ್ವೆ ತಿಳಿಸಿದೆ.
    0620 ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.25ಕ್ಕೆ ಹೊರಟು ಮರುದಿನ ಮುಂಜಾನೆ 6.35ಕ್ಕೆ ಲೋಕಮಾನ್ಯ ತಿಲಕ್ ತಲುಪಲಿದ್ದು. ನಂ.0619 ಎಲ್‌ಟಿಟಿಯಿಂದ ಮಧ್ಯಾಹ್ನ 3.20ಕ್ಕೆ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
    ತಿರುನಲ್ವೇಲಿ – ದಾದರ್-ತಿರುನಲ್ವೇಲಿ ಮಧ್ಯೆ ನಂ.06072/06071 ಸೂಪರ್ ಫಾಸ್ಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಡಿ.16ರಿಂದ 31ರ ವರೆಗೆ ಸಂಚರಿಸಲಿವೆ.

    Share Information
    Advertisement
    Click to comment

    You must be logged in to post a comment Login

    Leave a Reply